Sovereign Gold Bond; ಇವತ್ತಿಂದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಅವಕಾಶ; 4 ದಿನ ಮಾತ್ರ ಟೈಂ!
ಬೆಂಗಳೂರು; ಕೇಂದ್ರ ಸರ್ಕಾರದ ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond) ಖರೀದಿಗೆ ಮತ್ತೆ ಅವಕಾಶ ಸಿಕ್ಕಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಈ ಗೋಲ್ಡ್ ಬಾಂಡ್ ಖರೀದಿ ಮಾಡಬಹುದು. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಈ ಬಾಂಡ್‌ಗಳನ್ನು ವಿತರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇದರಲ್ಲಿ ಹೂಡಿಕೆ ಮಾಡೋದು ಅತ್ಯಂತ ಸುರಕ್ಷಿತ. ಅಲ್ಲದೇ ಇದರಿಂದಾಗಿ ಬೇರೆಲ್ಲಾ ಹೂಡಿಕೆಗಳಿಗಿಂತ ಹೆಚ್ಚು ರಿಟರ್ನ್ಸ್ ಬರುತ್ತದೆ. ಹೀಗಾಗಿ ಈ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸುವಂತೆ ಎಲ್ಲಾ ಆರ್ಥಿಕ ತಜ್ಞರು ಸೂಚಿಸುತ್ತಾರೆ.
ಇದನ್ನೂ ಓದಿ; Millionaires Mindset; ದೇಶದ 79ರಷ್ಟು ಕೋಟ್ಯಧೀಶರು Zero ಇಂದ Hero ಆದವರು..!
2023-24ರ ಸಾಲಿನ ಕೊನೆಯ ಪ್ಲ್ಯಾನ್;
2023-24ರ ಸಾಲಿನ ಕೊನೆಯ ಪ್ಲ್ಯಾನ್; ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 2023-24ರ ಸಾಲಿನ ಪ್ಲ್ಯಾನ್ ಇದಾಗಿದೆ. ಇಂದು ಈ ಗೋಲ್ಡ್ ಬಾಂಡ್ ಬಿಡುಗಡೆಯಾಗಲಿದೆ. 6,271 ರೂಪಾಯಿಯಂತೆ ಒಂದು ಗ್ರಾಂಗೆ ಕೊಟ್ಟು ಖರೀದಿ ಮಾಡಬಹುದಾಗಿದೆ. ಐದು ವರ್ಷಕ್ಕೆ ಈ ಗೋಲ್ಡ್ ಬಾಂಡ್ ಮೆಚ್ಯುರಿಟಿ ಆಗಲಿದೆ.
2016ರಲ್ಲಿ ಹೂಡಿಕೆ ಮಾಡಿದ್ದವರಿಗೆ ಶೇ.163ರಷ್ಟು ಲಾಭ;
2016ರಲ್ಲಿ ಹೂಡಿಕೆ ಮಾಡಿದ್ದವರಿಗೆ ಶೇ.163ರಷ್ಟು ಲಾಭ; 2016ರಲ್ಲಿ ಈ ಸಾವರಿನ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡಿದವರು ಬಾಂಡ್‌ಗಳು ಈಗ ಮೆಚ್ಯುರಿಟಿಗೆ ಬಂದಿವೆ. ಫೆಬ್ರವರಿ 8ರಂದು ಮೆಚ್ಯುರಿಟಿ ಆಗಿವೆ. ಆಗ ಹೂಡಿಕೆ ಮಾಡಿದವರಿಗೆ ಶೇಕಡಾ 163ರಷ್ಟು ಹೆಚ್ಚು ಲಾಭ ಬಂದಿದೆ. ಅಂದರೆ ವಾರ್ಷಿಕವಾಗಿ 13.6 ದರದಲ್ಲಿ ಲಾಭ ಬಂದಿದೆ.
2016ರ ಫೆಬ್ರುವರಿ 8ರಂದು ಈ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಬಿಡುಗಡೆ ಮಾಡಲಾಗಿತ್ತು. ಆಗ ಗ್ರಾಮ್‌ಗೆ 2600 ರೂಪಾಯಿ ನಿಗದಿ ಮಾಡಲಾಗಿತ್ತು. ಈಗ ಅದರ ಬೆಲೆ 6271 ರೂಪಾಯಿ ಆಗಿದೆ. ಅಂದರೆ 2016ರಿಂದ ಇಲ್ಲಿಯವರೆಗೆ ಗ್ರಾಮ್‌ಗೆ 3671 ರೂಪಾಯಿ ಏರಿಕಕೆಯಾಗಿದೆ. ಒಂದು ವೇಳೆ ನೀವು 2016ರಲ್ಲಿ 100 ಗ್ರಾಮ್ ಚಿನ್ನದ ಖರೀದಿ ಮಾಡಿದ್ದರೆ, ಆಗ ಅದರ ಬೆಲೆ 2 ಲಕ್ಷದ 60 ಸಾವಿರ ರೂಪಾಯಿ ಆಗಿರುತ್ತಿತ್ತು. ಈಗ ಅದರ ಮೌಲ್ಯ ಬರೋಬ್ಬರಿ 6 ಲಕ್ಷದ 27 ಸಾವಿರ ರೂಪಾಯಿ.
ಇದನ್ನೂ ಓದಿ; Lazy Rich; ಶ್ರೀಮಂತರಾಗಬೇಕೆ..?, ಹಾಗಾದ್ರೆ ಈ 10 ವರ್ಷ ಶತ ಸೋಮಾರಿಗಳಾಗಿಬಿಡಿ!
ಎಲ್ಲೆಲ್ಲಿ ಖರೀದಿ ಮಾಡಲು ಅವಕಾಶವಿದೆ..?;
ಎಲ್ಲೆಲ್ಲಿ ಖರೀದಿ ಮಾಡಲು ಅವಕಾಶವಿದೆ..?; ಕೇಂದ್ರ ಸರ್ಕಾರ ಇಂದು ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಗೋಲ್ಡ್ ಬೆಲೆ ಏರಿಕೆಯಂತೆ ನಮಗೆ ರಿಟರ್ನ್ಸ್ ಸಿಗುತ್ತದೆ. ಇದರ ಜೊತೆ ವಾರ್ಷಿಕ 2.5ರಷ್ಟು ಬಡ್ಡಿ ಕೂಡಾ ಸಿಗುತ್ತದೆ. ಇಂದಿನಿಂದ ಫೆಬ್ರವರಿ 16ರವರೆಗೆ ಈ ಬಾಂಡ್‌ಗಳನ್ನು ಖರೀದಿ ಮಾಡಬಹುದು.
ಆಯ್ದ ವಾಣಿಜ್ಯ ಬ್ಯಾಕ್‌ಗಳು, ಪೋಸ್ಟ್ ಆಫಿಸ್‌ಗಳು, ಷೇರುಮಾರುಕಟ್ಟೆಯಲ್ಲಿ ಕೂಡಾ ಈ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಖರೀದಿ ಮಾಡಬಹುದು. ಈ ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನು ಆರ್ಬಿಐ ನಿರ್ವಹಿಸುತ್ತದೆ. 2016ರಲ್ಲಿ ಮೊದಲ ಬಾರಿಗೆ ಇದನ್ನು ಜಾರಿಗೆ ತರಲಾಯಿತು. 2023ರ ನವೆಂಬರ್ 30ರಂದು ಮೊದಲ ಸರಣಿಯ ಬಾಂಡ್ ಮೆಚ್ಯೂರ್ ಆಗಿದೆ. ಆ ಸರಣಿಯ ಬಾಂಡ್ ಶೇ. 12.9ರಷ್ಟು ವಾರ್ಷಿಕ ದರದಲ್ಲಿ ಲಾಭ ತಂದಿದೆ. ಈಗ 2024ರ ಫೆ. 8ರಂದು ಮೆಚ್ಯೂರ್ ಆಗಿದ್ದು ಎರಡನೇ ಸರಣಿ. ಇದು ಶೇ. 13.6ರ ವಾರ್ಷಿಕ ದರದಲ್ಲಿ ಹೂಡಿಕೆದಾರರಿಗೆ ಲಾಭ ಕೊಟ್ಟಿದೆ. ಈಗ ಹೂಡಕೆ ಮಾಡುವ ಬಾಂಡ್‌ಗಳಿಂದ ಶೇಕಡಾ 12ರಷ್ಟು ಲಾಭ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ; Money Mindset; ನಾವೇ ಸೃಷ್ಟಿಸಿದ ಹಣ ಪಳಗಿಸೋದು ಹೇಗೆ..?