EconomyInternational

ಆರ್ಥಿಕ ಅಸಮಾನತೆ ದೂರ ಮಾಡಲು 224 ಕೋಟಿ ರೂ. ಆಸ್ತಿ ದಾನ ಮಾಡಿದ ಯುವತಿ!

ಎಷ್ಟು ಹಣ, ಆಸ್ತಿ ಸಂಪಾದನೆ ಮಾಡಿದರೂ ಇನ್ನೂ ಬೇಕು ಬೇಕು ಎಂದು ಹೇಳುವವರು ಜಾಸ್ತಿ.. ಹೀಗಾಗಿ, ಬಹುತೇಕ ಎಲ್ಲಾ ಕಡೆ ಆರ್ಥಿಕ ಅಸಮಾನತೆ ಇದೆ.. ಹೀಗಾಗಿ ಇಲ್ಲೊಬ್ಬ ಯುವತಿ ಪಿತ್ರಾರ್ಜಿತವಾಗಿ ಬಂದ 224 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮರು ಹಂಚಿಕೆ ಮಾಡಿದ್ದಾಳೆ.. ಆಸ್ಟ್ರಿಯಾದ ಮರ್ಲಿನ್ ಎಂಗಲ್‌ಹಾರ್ನ್‌ ಎಂಬಾಕೆಯೇ ತನ್ನ ಆಸ್ತಿಯನ್ನು ಹಂಚಿಕೆ ಮಾಡಿರುವ ಯುವತಿ..

ಈಕೆ ಶ್ರೀಮಂತ ಉದ್ಯಮ ಕುಟುಂಬದಲ್ಲಿ ಜನಿಸಿದ್ದು, ಈಕೆಯ ಪಾಲಿಗೆ  224 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ ಬಂದಿತ್ತು.. ಆದ್ರೆ ದೇಶದಲ್ಲಿರುವ ಆರ್ಥಿಕ ಅಸಮಾನತೆಯನ್ನು ತಿಳಿದ ಯುವತಿ, ತನ್ನ ಮಾಲಿಗೆ ಬಂದ ಆಸ್ತಿಯನ್ನು ಬಡವರಿಗೆ ಮರು ಹಂಚಿಕೆ ಮಾಡಲು ನಿರ್ಧಾರ ಮಾಡುತ್ತಾಳೆ.. ಈ ಬಗ್ಗೆ ವಿವಿಧ ಕ್ಷೇತ್ರಗಳ ತಜ್ಞರ ಜೊತೆ ಚರ್ಚೆ ನಡೆಸಿ, ಹಣವನ್ನು ಏನು ಮಾಡಬೇಕು ಎಂಬುದರ ಬಗ್ಗೆ ಒಂದು ತೀರ್ಮಾನಕ್ಕೆ ಬಂದಿದ್ದಾಳೆ.

ಸಂಪತ್ತಿನ ಪುನರ್ವಿತರಣೆಗಾಗಿ ತನ್ನ ಯೋಜನೆಗಳೊಂದಿಗೆ ಆಕೆ ಹಲವರಿಗೆ ಆಸ್ತಿ ಹಂಚಿಕೆ ಮಾಡಿದ್ದಾಳೆ. ದೇಶದ ಸುಮಾರು 77 ಸಂಸ್ಥೆಗಳಿಗೆ ಸಂಪತ್ತನ್ನು ಹಂಚಲಾಗುವುದು ಎಂದು ಹೇಳಿದ್ದಾರೆ. ಹವಾಮಾನ ಬದಲಾವಣೆ, ಶಿಕ್ಷಣ, ಆರೋಗ್ಯ, ಲಿಂಗ ಸಮಾನತೆ, ಮಹಿಳಾ ಆಶ್ರಯಗಳು, ನಿರಾಶ್ರಿತರು ನಡೆಸುತ್ತಿರುವ ಪತ್ರಿಕೆಗಳು, ಅಗ್ನಿಶಾಮಕ ಇಲಾಖೆಗಳು ಮತ್ತು ಪ್ರಜಾಪ್ರಭುತ್ವ ಪರ ಸಂಘಟನೆಗಳು ಈ ಪಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ನೆರವು ಒಂದೇ ಬಾರಿಗೆ ನೀಡುವ ಬದಲಾಗಿ ದೀರ್ಘಾವಧಿಯಲ್ಲಿ ನೀಡಲಾಗುವುದು ಎಂದು ಅದು ಹೇಳಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅನುಗುಣವಾಗಿ ಸಂಪತ್ತನ್ನು ಮರುಹಂಚಿಕೆ ಮಾಡುವ ಮೂಲಕ ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Share Post