National

ಮದುವೆ ಆಮಂತ್ರಣ ಪತ್ರಿಕೆ ತೂಕ ಬರೋಬ್ಬರಿ 2ಕೆಜಿ 280 ಗ್ರಾಂ..!

ಗಾಂಧಿನಗರ: ಇಲ್ಲಿನ ಉದ್ಯಮಿ ಮೌಲೇಶಭಾಯಿ ಉಕಾನಿ ಪುತ್ರ ಜೆ ಉಕಾನಿ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಮದುವೆ ಮುಗಿದು ೧೫ ದಿನಗಳೇ ಕಳೆದಿದ್ದರೂ ಈ ಆಹ್ವಾನ ಪತ್ರಿಕೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ.

ಜೆ ಉಕಾನಿ ಅವರ ಮದುವೆ ನವೆಂಬರ್‌ ೧೪ ರಿಂದ ೧೬ರವರೆಗೆ ರಾಜಸ್ತಾನದ ಜೋಧ್‌ಪುರ್‌ ಉಮೈದ್‌ ಭವನದಲ್ಲಿ ಅದ್ದೂರಿಯಾಗಿ ನಡೆದಿತ್ತು. ಈ ಮದುವೆ ಸಂಭ್ರಮದಲ್ಲಿ ಆಮಂತ್ರಣ ಪತ್ರಿಕೆಯೇ ಆಕರ್ಷಣೆ. ಯಾಕೆಂದ್ರೆ ಇವರು ಮಾಡಿಸಿದ್ದ ಆಮಂತ್ರಣ ಪತ್ರಿಕೆ ಬರೋಬ್ಬರಿ 4 ಕೆಜಿ 280 ಗ್ರಾಂ ಇದೆ. ಇದರ ಬೆಲೆ ಬರೋಬ್ಬರಿ ಏಳು ಸಾವಿರ ರೂಪಾಯಿಯಂತೆ..!

 

Share Post