ತೆರೆಗೆ ಬರುವ ಮುನ್ನವೇ ‘RRR’ ಕೋಟಿ ಕೋಟಿ ಲೂಟಿ
ಹೈದರಾಬಾದ್: ರಾಜಮೌಳಿ ಸಿನಿಮಾ ಅಂದ್ರೆನೆ ಎಲ್ಲರ ಕಣ್ಣು ಹುಬ್ಬೇರಿಸುವಂತಿರುತ್ತದೆ. ಅವರ ಎಲ್ಲಾ ಸಿನಿಮಾಗಳು ಇದುವರೆಗೂ ಪ್ಲಾಪ್ ಅನ್ನುವ ಹೆಸರು ಕೇಳೇ ಇಲ್ಲ ಹಾಗಾಗಿಯೇ ರಾಜಮೌಳಿ ಸಿನಿಮಾಗಳ ಮೇಲೆ ನಿರೀಕ್ಷೆ ಜಾಸ್ತಿ. ಅದರಂತೆ ಈಗ ಆರ್‌ಆರ್‌ಆರ್ ಸಿನಿಮಾ ಕೂಡ ಹೊರತಾಗಿಲ್ಲ ಬಿಡಿ. ಸಿನಿಮಾ ಬಿಡುಗಡೆ ಆಗೋದಕ್ಕೂ ಮೊದಲೇ ಕೋಟಿ ಕೋಟಿ ಲೂಟಿ ಹೊಡೆದಿರುವುದು ಅಭಿಮಾನಿಗಳಲ್ಲಿ ಸಂತೋಷ ಉಂಟುಮಾಡಿದೆ. ‘ಆರ್‌ಆರ್‌ಆರ್’ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಡಿಸೆಂಬರ್ 9ರಂದು ರಿಲೀಸ್ ಆಗುವ ಟ್ರೇಲರ್ ಮೇಲೆಯೂ ಹೆಚ್ಚು ಕುತೂಹಲ ಇಟ್ಟುಕೊಳ್ಳಲಾಗಿದೆ. ಅಲ್ಲದೆ ಇಬ್ಬರು ಸೂಪರ್ ಸ್ಟಾರ್‌ಗಳಿಂದ ಕೂಡಿದ ಸಿನಿಮಾ ರಾಮ್‌ಚರಣ್ ಹಾಗೂ ತಾರಕ್ ಅಭಿಮಾನಿಗಳಲ್ಲಿ ಬಹು ನಿರೀಕ್ಷೆ ಹುಟ್ಟಸಿದೆ ಹಾಗಾಗಿ ರಿಲೀಸ್ಗೂ ಮೊದಲೇ ಈ ಚಿತ್ರ ಬರೋಬ್ಬರಿ 890 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗುತ್ತಿದೆ. ಹಾಗೆಯೇ ಚಿತ್ರದಲ್ಲಿನ ಹಾಡಿನ
ಹಕ್ಕು, ಸೆಟಲೈಟ್ ಹಕ್ಕು ಸೇರಿದಂತೆ ಎಲ್ಲದರಲ್ಲೂ ಈಗಾಗಲೇ ಡೀಲ್ಗಳು ಕುದುರಿವೆ. ಹೀಗಾಗಿ, ಸಿನಿಮಾ ರಿಲೀಸ್ಗೂ ಮೊದಲೇ ಇಷ್ಟೊಂದು ದೊಡ್ಡ ಮೊತ್ತದ ಬ್ಯುಸಿನೆಸ್ ಮಾಡಿದೆ. ಸಿನಿಮಾ ತಜ್ಞರ ಪ್ರಕಾರ ಈ ಸಿನಿಮಾ ವಿದೇಶದಲ್ಲಿ 1000+ ಮಲ್ಟಿಫ್ಲೆಕ್ಸ್ನಲ್ಲಿ ಬಿಡುಗಡೆ ಆಗುತ್ತಿದೆ. ಇದರಿಂದ ಬಾಕ್ಸ್ ಆಫೀಸ್ಗಳಿಕೆ ಕೂಡ ಹೆಚ್ಚುವ ನಿರೀಕ್ಷೆ ಇದೆ.