LifestyleNational

ಈ ದೇಗುಲಗಳಿಗೆ ಭೇಟಿ ಕೊಟ್ಟರೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತಂತೆ..!

ಬೆಂಗಳೂರು; ಕೆಲವೊಬ್ಬರು ಉದ್ಯೋಗ ಸಿಗದೇ ಇದ್ದಾಗ ದೇವರು, ಜ್ಯೋತಿಷಿಗಳ ಮೊರೆಹೋಗುತ್ತಾರೆ. ಜಾತಕ ಸರಿಯಿಲ್ಲ ಅದಕ್ಕೇ ಉದ್ಯೋಗ ಸಿಗುತ್ತಿಲ್ಲವೇನೋ ಎಂದು ಪರಿತಪಿಸುತ್ತಾರೆ. ಇಂತಹವರಿಗೆಂದೇ ಮೂರು ದೇವಾಲಯಗಳಿವೆ. ಈ ದೇಗುಲಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರೆ ಉದ್ಯೋಗ ಸಿಗುತ್ತಂತೆ. ನಿಮಗೆ ಇರುವ ಉದ್ಯೋಗ ಸರಿಹೊಂದದೆ ಇದ್ದರೆ, ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದರೆ, ಸರ್ಕಾರಿ ಉದ್ಯೋಗ ಬೇಕೆಂದಿದ್ದರೆ ತಮಿಳುನಾಡಿನಲ್ಲಿರುವ ಈ ಮೂರು ದೇಗುಲಗಳಿಗೆ ಭೇಟಿ ನೀಡಿದರೆ ಸಾಕು. ಉದ್ಯೋಗ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ.

1. ಶ್ರೀ ಜಂಬುಕೇಶ್ವರ ದೇವಸ್ಥಾನ

ತಿರುಚ್ಚಿಯ ತಿರುವನೈಕ್ಕಾವಲ್‌ನಅಖಿಲಾಂಡೇಶ್ವರಿ ಸಮೇತ ಜಂಬುಕೇಶ್ವರ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿದೆ. ಇದು ಪಂಚಭೂತ ಸ್ಥಳಗಳಲ್ಲಿ ಒಂದು ಎಂಬ ನಂಬಿಕೆ ಇದೆ. ಇಲ್ಲಿರುವ ಲಿಂಗದ ಕೆಳಗಿನಿಂದ ನೀರು ಹರಿಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ದೇವರನ್ನು ಪೂಜಿಸಿ ಪ್ರಾರ್ಥನೆ ಮಾಡಿದರೆ ಉದ್ಯೋಗಿ ಸಿಗುತ್ತದೆ ಎಂಬ ನಂಬಿಕೆ ಇದೆ.

ಇದಕ್ಕೊಂದು ಪೌರಾಣಿಕ ಇತಿಹಾಸ ಕೂಡಾ ಇದೆ. ಈ ದೇಗುವ ಪುರಾಣ ಪ್ರಸಿದ್ಧಿ ಹೊಂದಿರುವುದರಿಂದ ಸಾಕಷ್ಟು ಭಕ್ತರು ಇಲ್ಲಿಗೆ ಬರುತ್ತಾರೆ. ನಿರುದ್ಯೋಗಿಗಳು, ಉದ್ಯೋಗ ಬದಲಾಯಿಸಬೇಕು ಎಂದುಕೊಂಡಿರುವವರು ಇಲ್ಲಿಗೆ ಬಂದು ಜಂಬುಕೇಶ್ವರನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುತ್ತಾರೆ. ಇದರಿಂದಾಗಿ ತಮ್ಮ ವೃತ್ತಿ ಜೀವನದ ಮೇಲೆ ಪ್ರಭಾವ ಬೀರುವ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

ಪೂಜೆ ಮಾಡಿ ಹರಕೆ ಹೊತ್ತ ನಂತರ ಬೇಡಿಕೆ ಈಡೇರಿದರೆ ಅವರ ಮತ್ತೆ ದೇವರ ದರ್ಶನ ಪಡೆಯುತ್ತಾರೆ, ದೇವರಿಗೆ ಸೀರೆಗಳನ್ನು ಅರ್ಪಿಸಿ ದೇವರಿಗೆ ಧನ್ಯವಾದ ಅರ್ಪಿಸುತ್ತಾರೆ.

2. ಶ್ರೀ ಆದಿ ಕುಂಬೇಶ್ವರ ದೇವಸ್ಥಾನ

ಕುಂಭಕೋಣಂನಲ್ಲಿ ಮಂಗಳಾಂಬಿಕಾ ಸಮೇತ ಆದಿ ಕುಂಬೇಶ್ವರರ್ ದೇವಸ್ಥಾನ ಇದೆ.  ಇಲ್ಲಿನ ದೇವಿ ಮಂಗಳಾಂಬಿಕೈ ದೇಗುಲ 64 ಶಕ್ತಿ ಪೀಠಗಳಲ್ಲಿ ಒಂದು. ದೇವಿಯು 36 ಕೋಟಿ ಮಂತ್ರ ಶಕ್ತಿಯನ್ನು ಹೊಂದಿದ್ದಾಳೆ ಎಂದು ಭಕ್ತರು ನಂಬಿದ್ದಾರೆ.  ಹೀಗಾಗಿ ಈ ದೇವಿಯನ್ನು ಮಂತ್ರ ಪೀಠೇಶ್ವರಿ ಅಂತಾನೂ ಕರೆಯಲಾಗುತ್ತದೆ. ನಿರುದ್ಯೋಗಿಗಳು, ಉದ್ಯೋಗ ಬದಲಾಯಿಸುವವರು, ಸರ್ಕಾರಿ ಉದ್ಯೋಗ ಬಯಸುವವರು ಇಲ್ಲಿಗೆ ಬಂದು ಅಭಿಷೇಕ, ಅರ್ಚನೆ ಇತ್ಯಾದಿಗಳನ್ನು ಮಾಡುತ್ತಾರೆ. ಆದಿ ಕುಂಬೇಶ್ವರರ್ ಮತ್ತು ಮಂಗಳಾಂಬಿಕೆಗೆ ವಸ್ತ್ರಗಳನ್ನು  ಸಮರ್ಪಿಸಿ ಉದ್ಯೋಗ ಕೊಡಿಸುವಂತೆ ಬೇಡಿಕೊಳ್ಳುತ್ತಾರೆ.

3. ಶ್ರೀ ಪಾರ್ಥಸಾರಥಿ ದೇವಸ್ಥಾನ

ಶ್ರೀ ಪಾರ್ಥಸಾರಥಿ ದೇವಸ್ಥಾನ ಚೆನ್ನೈನ ತಿರುವಲ್ಲಿಕೇಣಿಯಲ್ಲಿದೆ. ಇಲ್ಲಿನ ಪ್ರಧಾನ ದೇವರು ವಿಷ್ಣು.  ಜ್ಞಾನ, ಉತ್ತಮ ಶಿಕ್ಷಣ, ಉದ್ಯೋಗ ಸಿಗಬೇಕು ಎಂಬುವವರು ಇಲ್ಲಿಗೆ ಬಂದು ಪೂಜೆ ಮಾಡುತ್ತಾರೆ. ಇಲ್ಲಿನ ಯೋಗ ನರಸಿಂಹನನ್ನು ಪೂಜಿಸುತ್ತಾರೆ. ಮಾಡುತ್ತಿರುವ ಕೆಲಸ, ವ್ಯವಹಾರದಲ್ಲಿ ಅಭಿವೃದ್ಧಿ, ಹೊಸ ಉದ್ಯೋಗ ಬಯಸುವವರು ಇಲ್ಲಿನ ದೇವರನ್ನು ಪೂಜಿಸುತ್ತಾರೆ. ಸಕ್ಕರೆ ಅಥವಾ ಸಿಹಿ ಪೊಂಗಲ್‌ ಅನ್ನು ದೇವರಿಗೆ ನೈವೇದ್ಯವಾಗಿ ನೀಡುತ್ತಾರೆ.

 

Share Post