Crime

ಮಹಾರಾಷ್ಟ್ರದಲ್ಲೊಂದು ಭೀಕರ ಮರ್ಯಾದಾ ಹತ್ಯೆ

ಮಹಾರಾಷ್ಟ್ರ: ಮರ್ಯಾದಾ ಹತ್ಯೆ ಅಂದ್ರೆ ಥಟ್‌ ಅಂತ ನಮಗೆ ನೆನಪಾಗೋದು ಸೈರಟ್‌ ಸಿನಿಮಾ ಹಾಗೂ ತೆಲುಗಿನ ಪ್ರಣಯ್‌ ಮರ್ಡರ್‌ ಮಿಸ್ಟರಿ, ಅಂಥದ್ದೇ ದಾರುಣ ಹತ್ಯೆಯೊಂದು  ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ. ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ತಾಯಿ-ಮಗ ಸೇರಿಕೊಂಡು ಗರ್ಭಿಣಿ ಹೆಣ್ಣುಮಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದಾರೆ.ಕೀರ್ತಿ ಎಂಬ ಯುವತಿ 6ತಿಂಗಳ ಹಿಂದೆ ತಾನು ಪ್ರೀತಿಸಿದ್ದ ಯುವಕನನ್ನು ವರಿಸಿ ವಿರ್ಗಾನ್‌ ಪೊಲೀಸ್‌ ಠಾಣೆ ಏರಿಯಾದಲ್ಲಿ ನೆಮ್ಮದಿಯಿಂದ ವಾಸ ಮಾಡ್ತಿದ್ರು, ಇದನ್ನು ಸಹಿಸದ ಕೀರ್ತಿ ತಾಯಿ ಶೋಭಾ ಒಂದು ವಾರದ ಹಿಂದೆ ಕರೆ ಮಾಡಿ ನಿನ್ನ ನೋಡ್ಬೇಕು ನಿಮ್ಮ ಮನೆ ವಿಳಾಸ ತಿಳಿಸು, ಎಂದು ಅಡ್ರೆಸ್‌ ಪಡೆದು ಯಾವುದೇ ಅನುಮಾನ ಬರದ ಹಾಗೆ ಮಾತನಾಡಿಸಿ ಮುಂದಿನ ವಾರ ಅಣ್ಣನೊಂದಿಗೆ ಬರುವುದಾಗಿ ಹೇಳಿ ವಾಪಸಾಗಿದ್ದಾಳೆ.  ಮಗನೊಂದಿಗೆ ಭಾನುವಾರ ಕೀರ್ತಿ ಮನೆಗೆ ಬಂದೊಡನೆ ಸೋದರಿ ಗರ್ಭವತಿ ಅನ್ನೋದನ್ನು ನೋಡದೆ ಸಂಕೇತ್‌  ಕೊಡಲಿಯಿಂದ ಕೀರ್ತಿಯ ಕತ್ತನ್ನು ಸೀಳಿ ರುಂಡ-ಮುಂಡ ಬೇರ್ಪಡಿಸಿದ್ದಾನೆ.  ಸದ್ಯ ಆರೋಪಿಗಳನ್ನು ವಿರ್ಗಾನ್‌ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಿಂದ ಇಡೀ ಔರಂಗಾಬಾದ್‌ ಜಿಲ್ಲೆ ತಲ್ಲಣಗೊಂಡಿದೆ.

Share Post