Modi Mega Road Show; ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋ; ಮೇ.6ಕ್ಕೆ 42 ಕಿಲೋಮೀಟರ್ ರ್ಯಾಲಿ
ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಮತ್ತೊಂದು ಮೆಗಾ ರೋಡ್ ಶೋ ನಡೆಸಲಿದ್ದಾರೆ. ಮೇ ಆರರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಸುಮಾರು 42 ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮೊನ್ನೆಯಷ್ಟೇ ಮೋದಿಯವರು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ರೋಡ್ ಶೋ ನಡೆಸಿ ಗಮನ ಸೆಳೆದಿದ್ದರು. ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಈ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಮೋದಿಯವರು ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ರೋಡ್ ನಡೆಸಲು ಮುಂದಾಗಿದ್ದಾರೆ. ಮೇ ಆರರಂದು ಅವರು ಬೆಂಗಳೂರಿನಲ್ಲಿ 42 ಕಿಲೋ ಮೀಟರ್‌ವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಸುಮಾರು ನಾಲ್ಕರಿಂದ ಆರು ಗಂಟೆಗಳ ಕಾಲ ಮೋದಿ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಲ್ಲಿ ವಾಹನವನ್ನು ನಿಲ್ಲಿಸಿ ಭಾಷಣಗಳನ್ನು ಕೂಡಾ ಮೋದಿ ಮಾಡಲಿದ್ದಾರೆ.
ಕೆಲಕಡೆ ವಾಹನದಿಂದ ಇಳಿದು ಜನರ ಜೊತೆ ಮಾತನಾಡುವ, ಪಾದಯಾತ್ರೆ ಮೂಲಕವೂ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.