International

ಪಾಕಿಸ್ತಾನದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ; ಕಾರಣ ಏನು ಗೊತ್ತಾ..?

ಇಸ್ಲಾಮಾಬಾದ್; ಎಲ್ಲಾ ದೇಶಗಳೂ ಹೊಸ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಆದ್ರೆ ಪಾಕಿಸ್ತಾನದಲ್ಲಿ ಇದಕ್ಕೆ ಅವಕಾಶವಿಲ್ಲ. ಯಾಕಂದ್ರೆ ಅಲ್ಲಿನ ಸರ್ಕಾರವೇ ಹೊಸ ವರ್ಷಾಚರಣೆಯನ್ನು ನಿಷೇಧ ಮಾಡಿದೆ. ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನ್ವಾರುಲ್‌ ಹಕ್‌ ಕಾಕರ್‌ ಈ ಘೋಷಣೆ ಮಾಡಿದ್ದಾರೆ.

ಪಾಕಿಸ್ತಾನದ ದೇಶದ ಜನರನ್ನುದ್ದೇಶಿಸಿ ಮಾತನಾಡಿರುವ ಅವರು, ಇಸ್ರೇಲ್‌-ಹಮಾಸ್‌ ಯುದ್ಧದಿಂದ ಅಲ್ಲಿನ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಗಾಜಾ ಜನರಿಗಾಗಿ ದನಿ ಎತ್ತಬೇಕಿದೆ. ಹೀಗಾಗಿ ನಾವು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಹೀಗಾಗಿ ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆ ಮಾಡೋದು ಬೇಡ. ಇದಕ್ಕೆ ದೇಶದ ಜನರೆಲ್ಲಾ ಸಹಕಾರ ನೀಡಬೇಕು ಎಂದು ಅವರು ಪಾಕಿಸ್ತಾನದ ಜನಕ್ಕೆ ಕರೆ ಕೊಟ್ಟಿದ್ದಾರೆ.

ಪ್ಯಾಲೆಸ್ತೀನ್‌ನಲ್ಲಿನ ಗಂಭೀರ ಪರಿಸ್ಥಿತಿ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಹೊಸ ವರ್ಷಾಚರಣೆ ಮಾಡುವುದು ಬೇಡ ಎಂದು ಅವರು ಕರೆ ನೀಡಿದ್ದಾರೆ.

 

Share Post