HealthInternational

5 ಕಿಲೋ ಮೀಟರ್‌ ನಡೆದುಬಂದು 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಟೆಲ್‌ ಅವೀವ್‌; ಪ್ಯಾಲೇಸ್ತೀನಿನಲ್ಲಿ ಯುದ್ಧ ಪ್ರದೇಶದಿಂದ ಸುಮಾರು ಐದು ಕಿಲೋ ಮೀಟರ್‌ ದೂರ ನಡೆದುಬಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು, ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ನಾಲ್ಕೂ ಮಕ್ಕಳು ಆರೋಗ್ಯವಾಗಿವೆ ಎಂದು ತಿಳಿದುಬಂದಿದೆ. 

ಯುದ್ಧದಿಂದ ಸಾಕಷ್ಟು ಹಾನಿಗೊಳಗಾಗಿರುವ ಪ್ಯಾಲೆಸ್ತೇನಿನ ಉತ್ತರ ಪ್ರದೇಶದಲ್ಲಿರುವ ಮನೆಯಲ್ಲಿ ಈ ಮಹಿಳೆ ವಾಸ ಮಾಡುತ್ತಿದ್ದಳು. ತುಂಬು ಗರ್ಭಿಣಿಯಾಗಿದ್ದ ಮಹಿಳೆ ಹೆರಿಗೆ ಮಾಡಿಸಲು ಹತ್ತಿರದಲ್ಲಿ ಆಸ್ಪತ್ರೆ ಇರಲಿಲ್ಲ. ಹೀಗಾಗಿ ಐದು ಕಿಲೋ ಮೀಟರ್‌ ನಡೆದುಬಂದು ಆಸ್ಪತ್ರೆಯೊಂದರಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಇಮಾನ್ ಅಲ್-ಮಸ್ರಿ ಎಂಬ ಮಹಿಳೆಯೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದಾಕೆ. ಈಕೆ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿದ್ದಳು. ಇಲ್ಲಿಂದ ಈಕೆ ಆಸ್ಪತ್ರೆಗೆ ಹೋಗಬೇಕೆಂದರೆ ದಕ್ಷಿಣಕ್ಕೆ ದೇರ್‌ ಅಲ್‌ ಬಲಾಹ್‌ಗೆ ಹೋಗಬೇಕಿತ್ತು. ಅಲ್ಲಿಗೆ ಹೋಗಲು ಸಾರಿಗೆ ವ್ಯವಸ್ಥೆ ಇರಲಿಲ್ಲ. ಈ ಕಾರಣದಿಂದ ಈ ಮಹಿಳೆ ತುಂಬು ಗರ್ಭಿಣಿಯಾಗಿದ್ದರೂ ಕೂಡಾ ಸುಮಾರು ಐದು ಕಿಲೋ ಮೀಟರ್‌ ನಡೆದುಕೊಂಡೇ ಹೋಗಿದ್ದಾಳೆ.

ಆದ್ರೆ ಯುದ್ಧದಿಂದ ಸಾಕಷ್ಟು ಜನ ಗಾಯಗೊಂಡಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ಕೂಡಾ ರೋಗಿಗಳು ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಬೇರೆ ರೋಗಿಗಳಿಗೆ ಜಾಗ ಕಲ್ಪಿಸಿಕೊಡುವ ಉದ್ದೇಶದಿಂದ ಮಹಿಳೆ ಈಗ ಆಸ್ಪತ್ರೆ ತೊರೆದಿದ್ದಾಳೆ. ದೇರ್‌ ಅಲ್‌ ಬಲಾಹ್‌ ನ ಸಣ್ಣ ಶಾಲೆಯೊಂದರಲ್ಲಿ ಆಕೆ ಆಶ್ರಯ ಪಡೆದಿದ್ದಾಳೆ.

 

Share Post