International

UKRAINE-RUSSIA WAR; ರಷ್ಯಾ ಸೇನೆಯಿಂದ ಟಿವಿ ಟವರ್‌ ಸ್ಫೋಟ; ಉಕ್ರೇನ್‌ನಾದ್ಯಂತ ಚಾನಲ್‌ಗಳು ಬಂದ್‌

ಕೀವ್‌; ರಷ್ಯಾ ಮಿಲಿಟರಿ ಪಡೆ ಉಕ್ರೇನ್‌ನ ಕೀವ್‌ ಮತ್ತು ಖಾರ್ಕೀವ್‌ ನಗರಗಳನ್ನೇ ಹೆಚ್ಚು ಟಾರ್ಗೆಟ್‌ ಮಾಡಿಕೊಂಡಿದೆ. ಎರಡೂ ನಗರಗಳ ಮೇಲೆ ದಾಳಿ ಮುಂದುವರೆಸಿದೆ. ಇಂದು ಕೀವ್‌ ನಗರದಲ್ಲಿ ದಾಳಿ ಹೆಚ್ಚಾಗುತ್ತಿದ್ದು, ರಷ್ಯಾ ಸೇನೆ ಇಲ್ಲಿನ ಟಿವಿ ಟವರ್‌ ಮೇಲೆ ಬಾಂಬ್‌ ಸ್ಫೋಟಿಸಿದೆ. ಇದರಿಂದಾಗಿ ಉಕ್ರೇನ್‌ ದೇಶದಲ್ಲಿ ಟಿವಿ ಚಾನಲ್‌ಗಳ ಪ್ರಸಾರ ಸಂಪೂರ್ಣ ಸ್ಥಗಿತವಾಗಿದೆ. 

ಟಿವಿ ಟವರ್‌ ಮೇಲೆ ಬಾಂಬ್‌ ಸ್ಫೋಟಿಸಿದ್ದರಿಂದಾಗಿ ಐದು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಟವಿ ಟವರ್‌ ಸಂಪೂರ್ಣ ಭಸ್ಮವಾಗಿದೆ. ಜೊತೆಗೆ ಎರಡನೇ ಮಹಾಯುದ್ಧದಲ್ಲಿ ಹತ್ಯೆಗೊಳಗಾದ ಯಹೂದಿಗಳ ಸ್ಮಾರಕವೂ ಧ್ವಂಸಗೊಂಡಿದೆ. ರಷ್ಯಾ ಮೊದಲೇ ಟಿವಿ ಟವರ್‌ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ,

ಇನ್ನು ಖಾರ್ಕೀವ್‌ನಲ್ಲಿ ಶೆಲ್‌ ದಾಳಿ ಮುಂದುವರೆದಿದೆ. ಶೆಲ್‌ ಮತ್ತು ರಾಕೆಟ್‌ ದಾಳಿಗೆ ನಿನ್ನೆಯಿಂದ ಕರ್ನಾಟಕದ ವಿದ್ಯಾರ್ಥಿ ನವೀನ್‌ ಸೇರಿ 11 ಮಂದಿ ಸಾವನ್ನಪ್ಪಿದ್ದಾರೆ.

Share Post