ತಮ್ಮ ಅಂಗಡಿಯಲ್ಲಿ ಲಕ್ಷ್ಮೀ ಪೂಜೆ ಮಾಡಿಸಿ ಗಮನ ಸೆಳೆದ ಮುಸ್ಲಿಂ ವ್ಯಕ್ತಿ
ಶಿವಮೊಗ್ಗ; ದೇವರೊಬ್ಬ ನಾಮ ಹಲವು ಅನ್ನೋದು ಗಾದೆ ಮಾತಿದೆ. ಅದರಂತೆ ನಡೆಯುವವರು ನಮ್ಮ ನಡುವೆ ತುಂಬಾ ಜನ ಇದ್ದಾರೆ. ಅದಕ್ಕೆ ಉದಾಹರಣೆ ಶಿವಮೊಗ್ಗದಲ್ಲಿ ಮೊಬೈಲ್ ಅಂಗಡಿ ನಡೆಸುವ ಮುಸ್ಲಿಂ ವ್ಯಕ್ತಿ. ಅಂದಹಾಗೆ ದೀಪಾವಳಿ ಹಬ್ಬವನ್ನು ಭಾವೈಕ್ಯತೆ ಹಬ್ಬವಾಗಿ ಆಚರಿಸಲಾಗುತ್ತದೆ. ಹಲವಾರು ಕಡೆ ಮುಸ್ಲಿಮರು ಕೂಡಾ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಆಚರಿಸುತ್ತಾರೆ. ಇನ್ನು ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ತನ್ನ ಅಂಗಡಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷ್ಮೀ ಪೂಜೆ ಮಾಡಿಸಿ ಭಾವೈಕ್ಯತೆ ಮರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯಲ್ಲಿ ತನ್ವೀರ್ ಎಂಬ ಯುವಕ ತನ್ನ ಮೊಬೈಲ್ ಅಂಗಡಿಯಲ್ಲಿ ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆ ಮಾಡಿಸಿದ್ದಾರೆ. ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ನ ಮೊಬೈಲ್ ಅಂಗಡಿಯಲ್ಲಿ ಪ್ರತಿವರ್ಷ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವುದು ವಾಡಿಕೆ. ಈ ಬಾರಿಯೂ ತನ್ವೀರ್ ಪುರೋಹಿತರನ್ನು ಕರೆಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.