Districts

ROBO SERVER: ಮೈಸೂರಿನ ಹೋಟೆಲ್‌ನಲ್ಲಿ ರೋಬೋ ಸರ್ವರ್..!

ಮೈಸೂರು:‌ ಹಲವು ವರ್ಷಗಳ ಹಿಂದೆಯೇ ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ರೋಬೋ ಸರ್ವರ್‌ಗಳ ಬಂದಿವೆ. ಆದ್ರೆ, ಸಾಂಸ್ಕೃತಿಕ ನಗರಿ ಮೈಸೂರಿಗೆ ಇದು ಹೊಸದು. ಮೈಸೂರಿಗೆ ಈಗ ಸೀರೆ ಧರಿಸಿರುವ ಹೆಣ್ಣು ರೋಬೋವೊಂದು ಕಮಾಲ್‌ ಮಾಡುತ್ತಿದೆ. ಮೈಸೂರಿನ ಜಯಚಾಮರಾಜೇಂದ್ರ ವೃತ್ತದ ಬಳಿಯ ಸಿದ್ಧಾರ್ಥ ಹೋಟೆಲ್‌ನಲ್ಲಿ ಈ ರೋಬೋ ತನ್ನ ಕೆಲಸ ಆರಂಭಿಸಿದೆ.

ಮುಂಬೈ, ಹೈದರಾಬಾದ್‌, ದೆಹಲಿ ಸೇರಿದಂತೆ ಹಲವು ನಗರಗಳ ಐಶಾರಾಮಿ ಹೋಟೆಲ್‌ಗಳಲ್ಲಿ ರೋಬೋಗಳು ಕಾರ್ಯ ನಿರ್ವಹಿಸುತ್ತಿವೆ. ಆದ್ರೆ, ಮಧ್ಯಮ ಹೋಟೆಲ್‌ಗಳಲ್ಲಿ ಇನ್ನೂ ರೋಬೋಗಳ ಕಾರ್ಯನಿರ್ವಹಣೆ ಕಡಿಮೆ. ಆದ್ರೆ, ಮೈಸೂರಿನ ಸಿದ್ಧಾರ್ಥ ಹೋಟೆಲ್‌ನ ಮಾಲೀಕರು, ಗ್ರಾಹಕರನ್ನು ಸೆಳೆಯುವ ಸಲುವಾಗಿ ರೋಬೋ ತರಿಸಿದ್ದಾರೆ. ಅದೂ ಕೂಡಾ ಸಾಂಸ್ಕೃತಿಕ ನಗರ ಮೈಸೂರಾದ್ದರಿಂದ, ಸುಸಂಸ್ಕೃತ ಮಹಿಳೆಯಂತಿರುವ ರೋಬೋವನ್ನೇ ತರಿಸಲಾಗಿದೆ.

ಕೆಂಪು ಸೀರೆಯುಟ್ಟ ರೋಬೋ ಇವತ್ತಿನಿಂದ ಸಿದ್ಧಾರ್ಥ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರನ್ನು ಸೆಳೆಯೋ ಪ್ರಯತ್ನವಾಗಿಯೇ ಹೋಟೆಲ್‌ ಮಾಲೀಕರು ದೆಹಲಿಯಿಂದ ಈ ರೋಬೋ ತರಿಸಿಕೊಂಡಿದ್ದಾರೆ. ರೋಬೋ ಆರ್ಡರ್‌ ಮಾಡಿದ್ದನ್ನು ಗ್ರಾಹಕರಿಗೆ ಸಪ್ಲೈ ಮಾಡುತ್ತಿದೆ. ಇದನ್ನು ನೋಡಿ ಗ್ರಾಹಕರು ಖುಷಿಯಾಗಿದ್ದಾರೆ.

ಇನ್ನು ಮೊದಲ ದಿನವಾದ್ದರಿಂದ ಗ್ರಾಹಕರು ರೋಬೋ ನೋಡಿ ಖುಷಿಯಾಗಿ, ಅದರ ಜೊತೆ ಸೆಲ್ಫಿ ಕೂಡಾ ತೆಗೆದುಕೊಳ್ಳುತ್ತಿದ್ದಾರೆ. ರೋಬೋ ಕಾರಣಕ್ಕೆ ಈ ಹೋಟೆಲ್‌ ಈಗ ಆಕರ್ಷಣೆಯ ಕೇಂದ್ರವಾಗಿದೆ.

Share Post