ಓಟಿಸ್ ಚಂಡಮಾರುತ; ಮೆಕ್ಸಿಕೋದಲ್ಲಿ 48 ಮಂದಿ ದಾರುಣ ಮರಣ
ಮೆಕ್ಸಿಕೋ; ದಕ್ಷಿಣ ಮೆಕ್ಸಿಕೋ ಓಟಿಸ್ ಚಂಡಮಾರುತಕ್ಕೆ ಸಿಲುಕಿದೆ. ಇದರಿಂದಾಗಿ ಅಲ್ಲಿನ ನರಕ ಅನುಭವಿಸುವಂತಾಗಿದೆ. ಚಂಡಮಾರುತಕ್ಕೆ ಸಿಲುಕಿ ಇದುವರೆಗೆ ಸುಮಾರು 48 ಜನರು ಬಲಿಯಾಗಿದ್ದಾರೆ. ಈ ಭಯಾನಕ ಚಂಡಮಾರುತದಿಂದ ಹಲವಾರು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.
ವಿದ್ಯುತ್, ನೀರು, ಇಂಟರ್‌ನೆಟ್ ನೆಟ್ವರ್ಕ್ ಸಿಗದೆ ಇಲ್ಲಿನ ಜನ ಪರದಾಡುತ್ತಿದ್ದಾರೆ. ಓಟಿಸ್ ಅಬ್ಬರಕ್ಕೆ ದಶಕಗಳಿಂದ ನಿರ್ಮಿತವಾದ ನಗರಗಳ ಗುರುತೇ ಸಿಗದಂತೆ ಬದಲಾಗಿವೆ. 1997ರಲ್ಲಿ ಪೌಲಿನಾ ಚಂಡಮಾರುತಕ್ಕೆ ಸಿಲುಕಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಆದರೆ ಓಟಿಸ್ಗೆ 48 ಜನರು ನಾಪತ್ತೆಯಾಗಿರುವು ಬೆಳಕಿಗೆ ಬಂದಿದೆ.