ಶಾಲೆಯಲ್ಲಿ ಓದುವಾಗ ಕ್ರಶ್; 60 ವರ್ಷಗಳ ನಂತರ ಪ್ರೇಮ ನಿವೇದನೆ..!
ಫ್ಲೋರಿಡಾ; ಫ್ಲೋರಿಡಾದ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಯಾಕಂದ್ರೆ, 60 ವರ್ಷಗಳ ಬಳಿಕ ವ್ಯಕ್ತಿಯೊಬ್ಬರು ಶಾಲೆಯಲ್ಲಿದ್ದಾಗ ಇಷ್ಟಪಟ್ಟಿದ್ದಾಕೆಗೆ ಐ ಲವ್ ಯು ಎಂದು ಹೇಳಿದ್ದಾರೆ. ಹೈಸ್ಕೂಲ್ ಓದುತ್ತಿದ್ದಾಗಿ ಡಾ.ಥಾಮಸ್ ಟ್ಯಾಂಪಾ ಎಂಬುವವರು ಹೈಸ್ಕೂಲ್ ಓದುತ್ತಿದ್ದಾಗ ನ್ಯಾನ್ಸಿ ಎಂಬಾಕೆಯನ್ನು ಇಷ್ಟಪಟ್ಟಿದ್ದರು. ಆದ್ರೆ ಆಕೆಗೆ ಅದನ್ನು ಹೇಳಿರಲಿಲ್ಲ. ಆದ್ರೆ ಅದಾದ 60 ವರ್ಷಗಳ ನಂತರ ಅಂತಾರಾಷ್ಟ್ರೀಯ ವಿಮಾನದಲ್ಲಿ ಇಬ್ಬರೂ ಭೇಟಿಯಾಗಿದ್ದು, ಈ ವೇಳೆ ಥಾಮಸ್ ಅವರು ತಮ್ಮ ಪ್ರೇಮ ನಿವೇದನೆ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ನ್ಯಾನ್ಸಿಯನ್ನು ದೂರದಿಂದ ನೋಡಿದ ಥಾಮಸ್ ಸಂತೋಷದಿಂದ ತೋಳುಗಳನ್ನು ಚಾಚುತ್ತಾರೆ. ನಂತರ ಇಬ್ಬರೂ ಭಾವುಕರಾಗಿ ಆಲಿಂಗನ ಮಾಡುತ್ತಾರೆ. ನಂತರ ಆಕೆಯನ್ನು ಆಸನದಲ್ಲಿ ಕೂರಿಸಿ ಮೊಣಕಾಲನ್ನು ನೆಲದ ಮೇಲೆ ಊರಿ ಉಂಗುರದೊಂದಿಗೆ ಒಂದು ಪತ್ರ ಕೊಡುತ್ತಾರೆ. ಪ್ರೇಮ ನಿವೇದನೆ ಮಾಡುತ್ತಾರೆ. ನ್ಯಾನ್ಸಿ ಕೂಡಾ ಅದಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಈ ವಿಡಿಯೋ ಮಿಲಿಯನ್‌ಗಟ್ಟಲೆ ಲೈಕ್‌ಗಳು ಬಂದಿವೆ.