International

ಓಟಿಸ್​​ ಚಂಡಮಾರುತ; ಮೆಕ್ಸಿಕೋದಲ್ಲಿ 48 ಮಂದಿ ದಾರುಣ ಮರಣ

ಮೆಕ್ಸಿಕೋ; ದಕ್ಷಿಣ ಮೆಕ್ಸಿಕೋ ಓಟಿಸ್​​ ಚಂಡಮಾರುತಕ್ಕೆ ಸಿಲುಕಿದೆ.  ಇದರಿಂದಾಗಿ ಅಲ್ಲಿನ ನರಕ ಅನುಭವಿಸುವಂತಾಗಿದೆ. ಚಂಡಮಾರುತಕ್ಕೆ ಸಿಲುಕಿ ಇದುವರೆಗೆ ಸುಮಾರು 48 ಜನರು ಬಲಿಯಾಗಿದ್ದಾರೆ. ಈ  ಭಯಾನಕ ಚಂಡಮಾರುತದಿಂದ ಹಲವಾರು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.

ವಿದ್ಯುತ್​, ನೀರು, ಇಂಟರ್‌ನೆಟ್‌ ನೆಟ್​ವರ್ಕ್​ ಸಿಗದೆ ಇಲ್ಲಿನ ಜನ ಪರದಾಡುತ್ತಿದ್ದಾರೆ.  ಓಟಿಸ್​ ಅಬ್ಬರಕ್ಕೆ ದಶಕಗಳಿಂದ ನಿರ್ಮಿತವಾದ ನಗರಗಳ ಗುರುತೇ ಸಿಗದಂತೆ ಬದಲಾಗಿವೆ. 1997ರಲ್ಲಿ ಪೌಲಿನಾ ಚಂಡಮಾರುತಕ್ಕೆ ಸಿಲುಕಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಆದರೆ ಓಟಿಸ್​ಗೆ 48 ಜನರು ನಾಪತ್ತೆಯಾಗಿರುವು ಬೆಳಕಿಗೆ ಬಂದಿದೆ.

Share Post