BengaluruCrime

ಬೇರೆ ರಾಜ್ಯಗಳಿಂದ ಡ್ರಗ್ಸ್‌ ಸಪ್ಲೈ; 7 ಪೆಡ್ಲರ್‌ಗಳನ್ನು ಬಂಧಿಸಿದ ಪೊಲೀಸರು..!

ಬೆಂಗಳೂರು; ಬೆಂಗಳೂರಿನಲ್ಲಿ ಡ್ರಗ್ಸ್‌ ಜಾಲ ವಿಸ್ತರಿಸುತ್ತಾ ಹೋಗುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಡ್ರಗ್ಸ್‌ ಸಪ್ಲೈ ಆಗುತ್ತಿದೆ. ಪೊಲೀಸರು ಡ್ರಗ್ಸ್‌ ಜಾಲವನ್ನು ಎಷ್ಟೇ ಮಟ್ಟ ಹಾಕಿದರೂ ಹೊಸ ಪೆಡ್ಲರ್‌ಗಳು ಹುಟ್ಟಿಕೊಳ್ತಿದ್ದಾರೆ. ಇದೀಗ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಡ್ರಗ್ಸ್‌ ಸಪ್ಲೈ ಮಾಡುತ್ತಿದ್ದ ಗುಂಪೊಂದನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.

ಏಳು ಜನ ಡ್ರಗ್‌ ಪೆಡ್ಲರ್‌ಗಳನ್ನು ಬಂಧನ ಮಾಡಲಾಗಿದ್ದು, ಇದರಲ್ಲಿ ಒಬ್ಬ ವಿದೇಶಿ ಮಹಿಳೆ  ಕೂಡಾ ಸೇರಿದ್ದಾಳೆ. ಸಾಹಿಲ್, ನಾಸಿರ್, ಆದಂ ಖಾನ್, ಸಮೀರ್, ನೈಜೀರಿಯಾ ಮೂಲದ ಹ್ಯಾಪಿನೆಸ್ ಎಂಬ ಮಹಿಳೆ ಬಂಧನವಾಗಿದ್ದಾಳೆ. ಬಂಧಿತರಿಂದ 300 ಗ್ರಾಂ ಎಂಡಿಎಂಎ ಮಾತ್ರೆ ವಶಕ್ಕೆ ಪಡೆಯಲಾಗಿದೆ.

 

Share Post