Bengaluru

ರಾಜ್ಯದ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಷಯ-ರಾಜ್ಯಪಾಲರು, ದೇವೇಗೌಡರಿಂದ ಶುಭ ಹಾರೈಕೆ

ಬೆಂಗಳೂರು: ಶಿವರಾತ್ರಿ, ಅರ್ಧನಾರೀಶ್ವರನ ರುದ್ರತಾಂಡವ….ಈ ದಿನ ದೇಶದಾದ್ಯಂತ ಅತ್ಯಂತ ಭಕ್ತಿ ಪೂರ್ವಕವಾಗಿ, ಉಪವಾಸ, ಮಡಿ ಮೈಲಿಗೆಗಳಿಂದ ಹಬ್ಬವನ್ನು ಆಚರಣೆ ಮಾಡ್ತಾರೆ. ಈ ಹಬ್ಬ ಎಲ್ರಿಗೂ ಒಳ್ಳೆಯದು ಮಾಡಲಿ ಎಂದು  ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

“ಕರ್ನಾಟಕದ ಸಮಸ್ತ ನಾಗರಿಕರಿಗೆ ಮಹಾಶಿವರಾತ್ರಿಯ ಶುಭಾಶಯಗಳು. ಶಿವನು ಎಲ್ಲರಿಗೂ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಶುಭ ಹಾರೈಸಿದ್ದಾರೆ.

ಅದೇ ರೀತಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ನಾಡಿನ ಜನರಿಗೆ ಶಿವರಾತ್ರಿ ಶುಭಾಷಯಗಳನ್ನು ತಿಳಿಸಿದ್ದಾರೆ. “ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕ್ಕೆ ಸಾಟಿ ಬೇರಿಲ್ಲ” ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಸರ್ವಶಕ್ತ ಪರಮೇಶ್ವರನು ಅನುಗ್ರಹವನ್ನು ಕೊಂಡಾಡುವ ಈ ಶುಭ ದಿನವು ತಮ್ಮೆಲ್ಲರ ಬಾಳಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ತರಲಿ,ಕೈಲಾಸಪತಿಯ ಕೃಪೆ ತಮ್ಮೆಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.

Share Post