CrimeDistricts

ಮೊಬೈಲ್‌ ಚಾರ್ಜರ್‌ ಬಾಯಿಗಿಟ್ಟುಕೊಂಡು 8 ತಿಂಗಳ ಮಗು ಸಾವು

ಕಾರವಾರ; ಮೊಬೈಲ್‌ ಚಾರ್ಜರ್‌ ಬಾಯಿಗಿಟ್ಟುಕೊಂಡ 8 ತಿಂಗಳ ಮಗುವಿಗೆ ವಿದ್ಯುತ್‌ ಶಾಕ್‌ ಹೊಡೆದು ಸಾವನ್ನಪ್ಪಿರುವ ದಾರುಣ ಘಟನೆ ಕಾರವಾರದಲ್ಲಿ ನಡೆದಿದೆ. ಪೋಷಕರ ನಿರ್ಲಕ್ಷ್ಯದಿಂದ ಈ ದಾರುಣ ಘಟನೆ ನಡೆದಿದೆ.

ಪೋಷಕರು ಮನೆಯಲ್ಲಿ ಮೊಬೈಲ್‌ ಚಾರ್ಜ್‌ ಮಾಡಿದ ನಂತರ ಚಾರ್ಜರ್‌ನ್ನು ಹಾಗೆಯೇ ಬಿಟ್ಟಿದ್ದರು. ಜೊತೆಗೆ ಸ್ವಿಚ್‌ ಕೂಡಾ ಆಫ್‌ ಮಾಡಿರಲಿಲ್ಲ. ನೆಲದ ಮೇಲೆ ಆಟವಾಡುತ್ತಿದ್ದ 8 ತಿಂಗಳ ಮಗು ಸಾನಿಧ್ಯ ಆ ವೈರ್‌ನ್ನು ತೆಗೆದು ಬಾಯಿಗೆ ಇಟ್ಟುಕೊಂಡಿದೆ. ಈ ವೇಳೆ ದೇಹಕ್ಕೆ ವಿದ್ಯುತ್‌ ಪ್ರವಹಿಸಿ ಮಗು ಸ್ಥಳದಕ್ಕೇ ಸಾವನ್ನಪ್ಪಿದೆ.

ಸಂತೋಷ್‌ ಕಲ್ಗುಟ್ಕರ್‌ ಹಾಗೂ ಸಂಜನಾ ದಂಪತಿಯ ಪುತ್ರಿ ಸಾನಿಧ್ಯ ಸಾವನ್ನಪ್ಪಿರುವ ದುರ್ದೈವಿ.

 

Share Post