DistrictsPolitics

ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಅಪರಿಚಿತ ವಾಹನ ಪತ್ತೆ

ಹುಬ್ಬಳ್ಳಿ; ಪ್ರಧಾನಿ ನರೇಂದ್ರ ಮೋದಿ ಇಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ರೋಡ್‌ ಶೋ ನಡೆಸಲಿದ್ದಾರೆ. ಈ ಮಾರ್ಗದ ಮಧ್ಯೆ ಅಪರಿಚಿತ ವಾಹನವೊಂದು ಪತ್ತೆಯಾಗಿದ್ದು, ಕೆಲಕಾಲ ಭೀತಿಗೆ ಕಾರಣವಾಗಿತ್ತು.

 ಹುಬ್ಬಳ್ಳಿಯ ಹೊಸೂರ್ ಕ್ರಾಸ್ ನಲ್ಲಿ ಅಪರಿಚಿತ ಕಾರೊಂದು ನಿಂತಿತ್ತು. ಎರಡು ದಿನಗಳಿಂದ ಕಾರು ಅಲ್ಲೇ ಇದ್ದು, ಅದು ಯಾರದ್ದು ಅನ್ನೋದು ಗೊತ್ತಾಗಿಲ್ಲ. ಹೀಗಾಗಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ವೋಲ್ಕ್ಸ್ ವ್ಯಾಗನ್ ಕಂಪನಿಯ ಕಾರನ್ನು ಪರಿಶೀಲಿಸಿದ್ದಾರೆ. ಆ ಕಾರಿನ ನಂಬರ್‌ ಎಂ ಎಚ್ 10, ಸಿಎ 6984 ಆಗಿದ್ದು, ಮಹಾರಾಷ್ಟ್ರ ರಾಜ್ಯದ ನೊಂದಣಿ ಹೊಂದಿದೆ. ಕಾರು ನೋಡಿ ಪೊಲೀಸರು ಅನುಮಾನಗೊಂಡಿದ್ದು, ಅದನ್ನು ಬೇರೆಡೆ ಶಿಫ್ಟ್‌ ಮಾಡಿದ್ದಾರೆ.

 

Share Post