CrimeNational

ಹತ್ತು ವರ್ಷದ ಬಾಲಕಿಗೆ ಚಿತ್ರ ಹಿಂಸೆ; ಮಹಿಳಾ ಪೈಲಟ್‌, ಪತಿಗೆ ಧರ್ಮದೇಟು

ನವದೆಹಲಿ; ಹತ್ತು ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ಇಟ್ಟುಕೊಂಡಿದ್ದಲ್ಲದೆ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಮಹಿಳಾ ಪೈಲಟ್‌ ಹಾಗೂ ಆಕೆಯ ಪತಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ದೆಹಲಿಯ ದ್ವಾರಕಾದಲ್ಲಿ ಘಟನೆ ನಡೆದಿದೆ.

ದೆಹಲಿಯ ದ್ವಾರಕಾದಲ್ಲಿ ವಾಸಿಸುವ ಮಹಿಳಾ ಪೈಟಲ್‌ ಕುಟುಂಬ ಹತ್ತು ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ಇಟ್ಟುಕೊಂಡಿತ್ತು. ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಅಪರಾಧ. ಹೀಗಿದ್ದರೂ, ಮಹಿಳಾ ಪೈಲಟ್‌ ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಳು. ಸಾಲದೆಂಬಂತೆ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದಳು. ಈ ವಿಚಾರ ತಿಳಿದ ಸಾರ್ವಜನಿಕರು ಆಕೆಗೆ ಥಳಿಸಿದ್ದಾರೆ. ಆಕೆಯ ಪತಿ ಹಾಗೂ ಏರ್‌ಲೈನ್ಸ್‌ ಸಿಬ್ಬಂದಿಗೂ ಥಳಿಸಲಾಗಿದೆ. ಯೂನಿಫಾರ್ಮ್‌ನಲ್ಲಿದ್ದಾಗಲೇ ದಾಳಿ ನಡೆಸಲಾಗಿದೆ.

ದಾಳಿ ಹಾಗೂ ಹಲ್ಲೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸಾರ್ವಜನಿಕರು ಮಹಿಳಾ ಪೈಲಟ್‌ ಕೆನ್ನೆಗೆ ಹೊಡೆದಿದ್ದು, ಜಡೆ ಹಿಡಿದು ಎಳೆದಾಡಿರುವ ವಿಡಿಯೋ ಅದಾಗಿದೆ.

Share Post