BengaluruPolitics

ಆಂಧ್ರ, ತೆಲಂಗಾಣ, ಪಂಜಾಬ್‌ ಕೂಡಾ ಕೊಡಲ್ವಂತೆ ಅಕ್ಕಿ; ಸರ್ಕಾರಕ್ಕೆ ತಲೆಬಿಸಿ

ಬೆಂಗಳೂರು; ಒಂದು ಕಡೆ ಕೇಂದ್ರ ಸರ್ಕಾರ ಹಣ ಕೊಡುತ್ತೇವೆ ಎಂದರೂ ಹೆಚ್ಚುವರಿ ಅಕ್ಕಿ ಕೊಡೋದಿಲ್ಲ ಎಂದು ಹೇಳುತ್ತಿದೆ. ಇನ್ನೊಂದು ಕಡೆ ಭತ್ತ ಹೆಚ್ಚು ಬೆಳೆಯುವ ರಾಜ್ಯಗಳು ಕೂಡಾ ನಮ್ಮ ಬಳಿ ಅಕ್ಕಿ ಇಲ್ಲ ಎಂದು ಹೇಳಿಬಿಟ್ಟಿವೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ತಲೆನೋವು ಶುರುವಾಗಿದೆ. ಮೊನ್ನೆಯಷ್ಟೇ ತೆಲಂಗಾಣ ಸರ್ಕಾರ ನಮ್ಮ ಬಳಿ ಅಕ್ಕಿ ಇಲ್ಲ ಎಂದು ಹೇಳಿತ್ತು. ಹೀಗಾಗಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ಆಂಧ್ರ ಪ್ರದೇಶ ಹಾಗೂ ಪಂಜಾಬ್‌ ಸರ್ಕಾರದ ಮೊರೆ ಹೋಗಿದ್ದವು. ಆದ್ರೆ ಆ ಎರಡು ರಾಜ್ಯಗಳು ಕೂಡಾ ನಮ್ಮ ಬಳಿ ಅಕ್ಕಿ ದಾಸ್ತಾನಿಲ್ಲ ಎಂದು ಹೇಳಿಬಿಟ್ಟಿವೆ.

ಇದರಿಂದಾಗಿ ರಾಜ್ಯ ಸರ್ಕಾರ ಸಂಪೂರ್ಣ ತಲೆಕೆಡಿಸಿಕೊಂಡಿದೆ. ಇನ್ನೊಂದೆಡೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಮೂರು ರಾಜ್ಯಗಳು ಅಕ್ಕಿ ಇಲ್ಲ ಎಂದಿವೆ. ಹೆಚ್ಚು ಭತ್ತ ಬೆಳೆಯುವ ರಾಜ್ಯಗಳ ಬಳಿಯೇ ಅಕ್ಕಿ ಇಲ್ಲ. ಕೇಂದ್ರದ ಬಳಿ ಅಕ್ಕಿ ದಾಸ್ತಾನಿದ್ದರೂ ಇಲ್ಲ ಎನ್ನುತ್ತಿದೆ. ಆದರೂ ನಾವು ಅನ್ನಭಾಗ್ಯ ಯೋಜನೆಯನ್ನು ವಿಸ್ತರಣೆ ಮಾಡಿಯೇ ತೀರುತ್ತೇವೆ. ಅಂತ್ಯೋದಯ ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ ತಲಾ ಹತ್ತು ಕೆಜಿ ಅಕ್ಕಿ ನೀಡೇ ನೀಡುತ್ತೇವೆ ಎಂದು ಹೇಳಿದ್ದಾರೆ.

Share Post