CrimeNational

10 ರೂಪಾಯಿ ಜ್ಯೂಸ್‌ 8 ಕೋಟಿ ರೂ. ಕಳ್ಳರನ್ನು ಪತ್ತೆ ಹಚ್ಚಿತು..!

ಚಂಡೀಗಢ; ಇದೇ ಜೂನ್‌ 10ರಂದು ಪಂಜಾಬ್‌ನಲ್ಲಿ ಕಳ್ಳರ ಗುಂಪೊಂದು ಬರೋಬ್ಬರಿ 8 ಕೋಟಿ 49 ಲಕ್ಷ ರೂಪಾಯಿ ದರೋಡೆ ಮಾಡಿತ್ತು. ಕಳ್ಳರನ್ನು ಹಿಡಿಯೋಕೆ ಪೊಲೀಸರು ಹರಸಾಹಸವೇ ಪಟ್ಟರು. ಕೊನೆಗೆ 10 ರೂಪಾಯಿ ಜ್ಯೂಸ್‌ ಒಂದು ಕಳ್ಳರನ್ನು ಪತ್ತೆ ಹಚ್ಚೋದಕ್ಕೆ ಸಹಾಯ ಮಾಡಿತು. ನಿಜಕ್ಕೂ ಇದು ಕುತೂಹಲದ ಸ್ಟೋರಿ ಅಲ್ಲವೇ..?

ಲೂಧಿಯಾನದಲ್ಲಿ ದರೋಡೆಕೋರರ ಗುಂಪೊಂದು ಜೂನ್‌ ಹತ್ತರಂದು 8 ಕೋಟಿ 49 ಲಕ್ಷ ರೂ. ದರೋಡೆ ಮಾಡಿದ್ದರು. ಆರೋಪಿಗಳನ್ನು ಪತ್ತೆಹಚ್ಚುವುದೇ ಪೊಲೀಸರಿಗೆ ತಲೆನೋವಾಗಿತ್ತು. ಆದ್ರೆ ಹತ್ತು ರೂಪಾಯಿ ಜ್ಯೂಸ್‌ನಿಂದ ಆರೋಪಿಗಳು ಸಿಕ್ಕಿದ್ದಾರೆ. ‘ಡಾಕು ಹಸೀನ’ ಎಂದೇ ಕುಖ್ಯಾತಿಯಾಗಿರುವ ಮನ್ದೀಪ್ ಕೌರ್ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್‌ನನ್ನು ಉತ್ತರಾಖಂಡದ ಚಮೋಲಿಯ ಹೇಮಕುಂಡ್ ಸಾಹಿಬ್‌ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಪಂಜಾಬ್‌ನ ಗಿಡ್ಡರ್ ಬಾಹಾ ಎಂಬಲ್ಲಿ ಗೌರವ್ ಎಂಬಾತನ್ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರೋಡೆ ಪ್ರಕರಣದಲ್ಲಿ ಒಟ್ಟು 12 ಮಂದಿ ಪಾಲ್ಗೊಂಡಿದ್ದು, ಇದರಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ.

ಕಳ್ಳತನ ಯಶಸ್ವಿಯಾಗಿದ್ದರಿಂದ ದರೋಡೆಕೋರ ದಂಪತಿ ಸಿಖ್‌ ದೇಗುಲಕ್ಕೆ ತೆರಳಿತ್ತು. ಈ ವೇಳೆ ಬಂಧಿಸಲಾಗಿದೆ. ಕಳ್ಳತನದ ಬಳಿಕ ದಂಪತಿ ನೇಪಾಳಕ್ಕೆ ಹೋಗಲು ನಿರ್ಧರಿಸಿದ್ದರು. ಆದ್ರೆ ಅದಕ್ಕೂ ಮೊದ್ಲು ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಡ್ ಸಾಹಿಬ್ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡೋಕೆ ತೀರ್ಮಾನಿಸಿತ್ತು. ಈ ವಿಷಯ ಪೊಲೀಸರಿಗೆ ದೊರೆತಿತ್ತು. ಆದ್ರೆ, ಉತ್ತರಾಖಂಡದ ಸಿಖ್‌ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರಿಂದ ಅದ್ರಲ್ಲಿ ಕಳ್ಳರನ್ನು ಪತ್ತೆ ಹಚ್ಚೋದು ಪೊಲೀಸರಿಗೆ ಕಷ್ಟವಾಗಿತ್ತು. ಹೀಗಾಗಿ, ಮಫ್ತಿಯಲ್ಲಿದ್ದ ಪೊಲೀಸರು, ಭಕ್ತಾಧಿಗಳಿಗೆ ಪಾನೀಯ ವ್ಯವಸ್ಥೆ ಮಾಡಿದ್ದರು. ಹತ್ತು ರೂಪಾಯಿಗೆ ಒಂದರಂತೆ ಪಾನೀಯ ಮಾರುತ್ತಿದ್ದರು. ಅಲ್ಲಿಗೆ ಬಂದ ದಂಪತಿ, ಪಾನೀಯ ಕುಡಿಯಲು ಮುಖಕ್ಕೆ ಕಟ್ಟಿದ್ದ ಬಟ್ಟೆಯನ್ನು ತೆಗೆದಿದ್ದಾರೆ. ಕೂಡಲೇ ಸುತ್ತುವರಿದ ಪೊಲೀಸರು ಅವರನ್ನು ಹಿಡಿದಿದ್ದಾರೆ.

Share Post