ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆಗೆ ಬಂಪರ್; ಸಿಕ್ತು ಹೆಚ್ಚುವರಿ ಖಾತೆ
ಬೆಂಗಳೂರು; ಸಿದ್ದರಾಮಯ್ಯ ನೇತೃತ್ವದ ಪೂರ್ಣ ಸಂಪುಟ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿತ್ತು. ಈಗಾಗಲೇ ಎಲ್ಲರಿಗೂ ಖಾತೆ ಹಂಚಿಕೆಯೂ ಆಗಿದೆ. ಆದ್ರೆ, ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಹಲವು ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇದೀಗ ಅದರಲ್ಲಿ ಎರಡು ಖಾತೆಗಳನ್ನು ಹೆಚ್ಚುವರಿಯಾಗಿ ಇಬ್ಬರು ಸಚಿವರಿಗೆ ಹಂಚಿಕೆ ಮಾಡಿದ್ದಾರೆ.
ಎಂ.ಬಿ.ಪಾಟೀಲ್ ಅವರಿಗೆ ಹೆಚ್ಚುವರಿಯಾಗಿ ಮೂಲಸೌಕರ್ಯ ಅಭಿವೃದ್ಧಿ ಖಾತೆ ನೀಡಲಾಗಿದೆ. ಇನ್ನು ಪ್ರಿಯಾಂಕ್ ಖ್ರಗೆಯವರಿಗೆ ಹೆಚ್ಚುವರಿಯಾಗಿ ಐಟಿ-ಬಿಟಿ ಖಾತೆ ನೀಡಲಾಗಿದೆ. 2013ರ ಸರ್ಕಾರದಲ್ಲೂ ಪ್ರಿಯಾಂಕ್ ಖರ್ಗೆಯವರು ಐಟಿ-ಬಿಟಿ ಖಾತೆಯನ್ನು ನಿಭಾಯಿಸಿದ್ದಾರೆ.