ಆಸ್ಟ್ರೇಲಿಯಾ ಸಂಸತ್ತಿನ ಸದಸ್ಯೆಯಾದ ಕೊಡಗಿನ ಬೆಡಗಿ; ಸಂಪ್ರದಾಯಿಕ ಉಡುಪಿನಲ್ಲೇ ಪ್ರಮಾಣ
ಮಡಿಕೇರಿ; ಪ್ರಪಂಚದಾದ್ಯಂತ ಭಾರತೀಯರು ನೆಲೆಸಿದ್ದಾರೆ. ಅಮೆರಿಕ ಸೇರಿ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ನಮ್ಮ ಭಾರತೀಯರು ಜನಪ್ರತಿನಿಧಿಗಳಾಗಿದ್ದಾರೆ. ಇದೀಗ ಕೊಡಗಿನ ಮಹಿಳೆಯೊಬ್ಬರು ಆಸ್ಟ್ರೇಲಿಯಾದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ, ಅವರು ಕೊಡಗಿನ ಸಂಪ್ರದಾಯಿಕ ಉಡುಗೆ ಧರಿಸಿಯೇ ಪ್ರಮಾಣ ವಚನ ಸ್ವೀಕಾರ ಮಾಡಿ ಗಮನ ಸೆಳೆದಿದ್ದಾರೆ.
ಚರಿಷ್ಮಾ ಎಂಬುವವರೇ ಕೊಡಗಿನ ಉಡುಪು ಧರಿಸಿ ಆಸ್ಟ್ರೇಲಿಯಾ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ ಮಹಿಳೆ. ಇವರು ಮೂಲತಃ ಕೊಡಗಿನ ನಾಪೋಕ್ಲು ಗ್ರಾಮದವರು. ವಿದೇಶದಲ್ಲಿ ಉದ್ಯೋಗದಲ್ಲಿರುವ ಕಲಿಯಂಡ ಚರಿಷ್ಮಾ ಆಸ್ಟ್ರೇಲಿಯಾದ ಲಿವರ್ ಪೂಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸಂಸತ್ತಿಗೆ ಆಯೆಕಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಕೆಲಸಕ್ಕೆಂದು ಆಸ್ಟ್ರೇಲಿಯಾಗೆ ಹೋಗಿದ್ದು, ಅಲ್ಲೇ ನೆಲೆಸಿದ್ದಾರೆ. ಇದೀಗ ಅವರು ಅಲ್ಲಿನ ಸರ್ಕಾರದಲ್ಲಿ ಭಾಗವಾಗಿ ಕರುನಾಡಿಗೆ ಕೀರ್ತಿ ತಂದುಕೊಟ್ಟಿದ್ದಾರೆ.