BengaluruPolitics

31 ಸಾವಿರ ಬೂತ್‌ಗಳಲ್ಲಿ ನಮಗೆ ಮುನ್ನಡೆ, ಗೆಲ್ಲೋದು ನಾವೇ; ಬಿ.ಎಲ್‌.ಸಂತೋಷ್‌ ವಿಶ್ವಾಸ

ಬೆಂಗಳೂರು; ಎಲ್ಲಾ ಸಮೀಕ್ಷೆಗಳೂ ಕಾಂಗ್ರೆಸ್‌ ಪರ ವರದಿ ಕೊಟ್ಟಿವೆ. ಆದ್ರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮಾತ್ರ ಬೇರೆಯದನ್ನೇ ಹೇಳುತ್ತಿದ್ದಾರೆ. ಶ್ರೀರಾಮನಿಗಾಗಿ ರಾಮ ಸೇನೆ ಯುದ್ಧ ಗೆದ್ದಂತೆ, ಮೋದಿಗಾಗಿ ಬೂತ್‌ ಸಮಿತಿ ಕಾರ್ಯಕರ್ತರು ಗೆಲ್ಲಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದಾರೆ.

ಯಾವ ಸಮೀಕ್ಷಾ ಸಂಸ್ಥೆಗಳೂ 2014ರಲ್ಲಿ ಬಿಜೆಪಿಗೆ 282 ಸೀಟುಗಳು ಬರುತ್ತವೆ ಎಂದು ಹೇಳಿರಲಿಲ್ಲ. 2019ರಲ್ಲಿ 303 ಸೀಟು ಬರುತ್ತೆ ಎಂದು ಹೇಳಿರಲಿಲ್ಲ. ಅಷ್ಟೇ ಅಲ್ಲ, 2108ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ 104 ಸೀಟು ಬರುತ್ತೆ ಎಂದು ಹೇಳಿರಲಿಲ್ಲ. ಆದ್ರೆ ನಿಜವಾಗಿ ಅಷ್ಟು ಸೀಟು ಬಂದಿದ್ದವು. 2018ರಲ್ಲಿ 24 ಸಾವಿರ ಬೂತ್‌ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಈ ಬಾರಿ 31 ಸಾವಿರ ಬೂತ್‌ಗಳಲ್ಲಿ ಮುನ್ನಡೆ ಸಾಧಿಸುತ್ತೆ. ಹಾಗಿದ್ರೆ ಬಿಜೆಪಿ ಎಷ್ಟು ಸೀಟು ಗೆಲ್ಲಲಿದೆ ಅನ್ನೋದನ್ನ ನೀವೇ ಊಹೆ ಮಾಡಿ ಎಂದು ಬಿ.ಎಲ್‌.ಸಂತೋಷ್‌ ಹೇಳಿದ್ದಾರೆ.

Share Post