ಮಂಚನಹಳ್ಳಿ ಮಹದೇವು ಪುತ್ರಿ ಐಶ್ವರ್ಯಾ ಬಿಜೆಪಿ ಸೇರ್ತಾರಾ..?
ಮೈಸೂರು; ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ ಜೋರಾಗಿ ನಡೆಯುತ್ತಿದೆ.. ಈಗಾಗಲೇ ಮಾಜಿ ಶಾಸಕ ವಾಸು ಪುತ್ರರು ಬಿಜೆಪಿ ಸೇರಿದ್ದಾರೆ.. ಮಂಡ್ಯದಲ್ಲಿ ಸಚ್ಚಿದಾನಂದ ಕಾಂಗ್ರೆಸ್ ಬಿಜೆಪಿ ಸೇರಿದ್ದಾರೆ. ಸಂಸದೆ ಸುಮಲತಾ ಕೂಡಾ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕೆಆರ್ ನಗರದ ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯಾ ಮಹದೇವ್ ಅವರು ಬಿಜೆಪಿ ಸೇರೋ ಸಾಧ್ಯತೆ ಇದೆ ಎನ್ನಲಾಗಿದೆ.
ಐಶ್ವರ್ಯಾ ಮಹದೇವು ಅವರು ಕೆಆರ್ ನಗರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುತ್ತಾ ಬಂದಿದ್ದಾರೆ. ಅದನ್ನು ಗುರುತಿಸಿರುವ ಕಾಂಗ್ರೆಸ್, ರಾಷ್ಟ್ರೀಯ ಮಾಧ್ಯಮ ವಕ್ತಾರೆಯಾಗಿ ನೇಮಿಸಿದೆ. ಈಗಾಗಲೇ ಅವರು ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸಿದ್ದರಾಮಯ್ಯ ಅವರ ಶಿಷ್ಯೆಯಾಗಿರುವ ಐಶ್ವರ್ಯಾ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಐಶ್ವರ್ಯಾ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.. ಆದ್ರೆ ಪಕ್ಷದಲ್ಲಿ ಈ ಅವಕಾಶ ಸಿಗದ ಕಾರಣ ಬೇಸತ್ತು ಬಿಜೆಪಿಗೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಹಿಂದುಳಿದ ವರ್ಗಕ್ಕೆ ಸೇರುವ ಯುವ ನಾಯಕಿಗೆ ಬಿಜೆಪಿ ಗಾಳ ಹಾಕಿದೆ. ಈ ಬಾರಿ ಕೆ. ಆರ್ ನಗರದಲ್ಲಿ ಬಿಜೆಪಿಯಿಂದ ಐಶ್ವರ್ಯ ಕಣಕ್ಕಿಳಿಸಲು ಪ್ಲಾನ್ ಮಾಡಿದೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಗೂ ಟಿಕೆಟ್ ನೀಡುವ ಭರವಸೆ ನೀಡಿದೆಯಂತೆ. ಐಶ್ವರ್ಯ ಬಿಜೆಪಿಯ ಕೆಲ ಮುಖಂಡರು ಸಂಪರ್ಕದಲ್ಲಿದ್ದಾರೆ. ಮೈಸೂರು ಭಾಗದಲ್ಲಿ ಬಿಜೆಪಿಗೆ ಮಹಿಳಾ ನಾಯಕಿಯರ ಕೊರತೆ ಇದೆ. ಈ ಹಿನ್ನೆಲೆ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೆಲ ಬಿಜೆಪಿ ನಾಯಕರ ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.