DistrictsPoliticsUncategorized

ಮೋದಿಗೆ ಎಷ್ಟು ವಯಸ್ಸಾಗಿದೆ..? ಇನ್ನೂ ಯಾಕೆ ರಾಜಕಾರಣದಲ್ಲಿದ್ದಾರೆ..? ; ಜಗದೀಶ್‌ ಶೆಟ್ಟರ್‌ ಪ್ರಶ್ನೆ

ಹುಬ್ಬಳ್ಳಿ; ಪ್ರಧಾನಿ ನರೇಂದ್ರ ಮೋದಿಯವರು ನಾಲ್ಕು ಬಾರಿ ಸಿಎಂ ಹಾಗೂ ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಅವರ ವಯಸ್ಸೆಷ್ಟು ಈಗ. ಆದರೂ ಇನ್ನೂ ಏಕೆ ರಾಜಕಾರಣದಲ್ಲಿದ್ದಾರೆ ಅಂತ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಪ್ರಶ್ನೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಕೌಂಟರ್‌ ಕೊಟ್ಟಿದ್ದಾರೆ.

ಪ್ರಧಾನಿಯ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ವಿರುದ್ಧವೂ ಕಿಡಿಕಾರಿರುವ ಜಗದೀಶ್‌ ಶೆಟ್ಟರ್‌, ಜೋಷಿಯವರು ನಾಲ್ಕು ಬಾರಿ ಮಂತ್ರಿಯಾಗಿದ್ದಾರೆ. ಅವರು ಇನ್ನೂ ಯಾಕೆ ಬೇರೆಯವರಿಗೆ ಬಿಟ್ಟುಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದರು. ನಾನು ಬಿಜೆಪಿ ಬಿಟ್ಟಿದ್ದು ಸುಮಾರು 20 ಕ್ಷೇತ್ರಗಳ ಮೇಲೆ ಎಫೆಕ್ಟ್‌ ಆಗಿದೆ ಎಂದಿರುವ ಶೆಟ್ಟರ್‌, ಆ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಸಾಕಷ್ಟು ಲಾಭವಾಗಿದೆ ಎಂದು ಹೇಳಿಕೊಂಡಿದ್ದಾರೆ.

Share Post