CinemaNational

ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಜೊತೆ ಶ್ರೀಲೀಲಾ ಐಟಂ ಸಾಂಗ್‌

ಹೈದರಾಬಾದ್‌; ತೆಲುಗಿನ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಚಿತ್ರರಂಗದಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ರಿಮೇಕ್‌ ಚಿತ್ರವೊಂದರಲ್ಲಿ ತಮ್ಮ ಸೋದರಳಿಯ ಸಾಯಿ ಧರಮ್‌ ತೇಜ್‌ ಜೊತೆ ಪವನ್‌ ಕಲ್ಯಾಣ್‌ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪವನ್‌ ಕಲ್ಯಾಣ್‌ ಜೊತೆ ಶ್ರೀ ಲೀಲಾ ಐಟಂ ಸಾಂಗ್‌ ವೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ.

ಶ್ರೀಲೀಲಾಗೆ ಇತ್ತೀಚೆಗೆ ತೆಲುಗಿನಲ್ಲಿ ಕ್ರೇಜ್‌ ಹೆಚ್ಚಾಗಿದೆ. ಧಮಾಕಾ ಚಿತ್ರದ ಸಕ್ಸಸ್‌ ನಂತರ ಅವರಿಗೆ ಬೇಡಿಕೆ ಜಾಸ್ತಿಯಾಗಿದೆ. ಅವರಿಗೆ ಹತ್ತಾರು ಅವಕಾಶ ಸಿಗುತ್ತಿವೆ. ಇದರ ನಡುವೆ ಪವನ್‌ ಕಲ್ಯಾಣ್‌ ಜೊತೆ ಐಟಂ ಸಾಂಗ್‌ಗೆ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ. ತಮಿಳಿನ ವಿನೋದಾಯ ಸೀತಮ್ ಚಿತ್ರದ ರೀಮೇಕ್‌ ಇದಾಗಿದೆ. ಸಮುದ್ರಖನಿ ಈ ಚಿತ್ರದ ನಿರ್ದೇಶಕರಾಗಿದ್ದಾರೆ.

Share Post