BengaluruCinemaCrime

ಮಾಸ್ಟರ್‌ ಆನಂದ್‌ಗೆ ವಂಚನೆ ಆರೋಪ; ಖಾಸಗಿ ಕಂಪನಿ ವಿರುದ್ಧ ದೂರು

ಬೆಂಗಳೂರು; ನಟ ಮಾಸ್ಟರ್‌ ಆನಂದ್‌ಗೆ ಖಾಸಗಿ ಕಂಪನಿಯೊಂದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾಸ್ಟರ್‌ ಆನಂದ್‌ ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿವೇಶನ ನೀಡೋದಾಗಿ ಮಲ್ಟಿ ಲೀಪ್ ವೆಂಚರ್ಸ್ ಹೆಸರಿನ ಕಂಪನಿಯು ಆನಂದ್ ಅವರಿಗೆ 18.50 ಲಕ್ಷ ರೂಪಾಯಿ ವಂಚನೆ ಎಂದು ಆರೋಪಿಸಲಾಗಿದೆ.

ಬೆಂಗಳೂರಿನ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ಕಂಪನಿ ನಿವೇಶನ ನೀಡುವುದಾಗಿ ಹೇಳಿತ್ತಂತೆ. ಮನಿಕಾ ಎಂಬುವವರಿಂದ ನಿವೇಶನ ಖರೀದಿಸಲು ಸಾಲ ಸೌಲಭ್ಯ ಕೂಡಾ ಒದಗಿಸುವುದಾಗಿಯೂ ಹೇಳಲಾಗಿತ್ತಂತೆ. ಅದರಂತೆ ಮಾಸ್ಟರ್‌ ಆನಂದ್‌ ಅವರು, 2000 ಚದರ ಅಡಿಯ ನಿವೇಶವನ್ನು 70 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದು, ಅದಕ್ಕೆ ಹಂತ ಹಂತವಾಗಿ 18.5 ಲಕ್ಷ ರೂಪಾಯಿ ಮುಂಗಡ ನೀಡಿದ್ದರಂತೆ. ಆದ್ರೆ ಕಂನಿ ಆ ಸೈಟ್‌ನನ್ನು ಬೇರೆಯವರಿಗೆ ಮಾರಾಟ ಮಾಡಿದೆ. ಇತ್ತ ಅಡ್ವಾನ್ಸ್‌ ಹಣವನ್ನೂ ಮಾಸ್ಟರ್‌ ಆನಂದ್‌ಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಟರ್‌ ಆನಂದ್‌ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share Post