ಪೆಸಿಪಿಕ್ ಮಹಾಸಮುದ್ರದಲ್ಲಿ ಬ್ಲ್ಯಾಕ್ ಹೋಲ್; ಇದರ ರಹಸ್ಯ ಏನು..?
ಇತ್ತೀಚೆಗೆ ಪೆಸಿಪಿಕ್ ಮಹಾಸಮುದ್ರದ ಮಧ್ಯದಲ್ಲಿ ಒಂದು ವಿಚಿತ್ರವಾದ ಬ್ಲ್ಯಾಕ್ ಹೋಲ್ ಕಾಣಿಸಿತ್ತು. ಇದರ ಮಿಸ್ಟರಿ ಕೊನೆಗೂ ಬಯಲಾಗಿದೆ.
ಕಳೆದ ತಿಂಗಳು ಹದ್ದಿನ ಕಣ್ಣಿಟ್ಟು ಗೂಗಲ್ ಮ್ಯಾಪ್ ಪರಿಶೀಲಿಸುತ್ತಿದ್ದ ಸೋಷಿಯಲ್ ಮೀಡಿಯಾ ಯೂಜರ್ ಒಬ್ಬರು, ಪೆಸಿಪಿಕ್ ಮಹಾ ಸಮುದ್ರದ ಮಧ್ಯದಲ್ಲಿ ಒಂದು ಕಪ್ಪು ಮಚ್ಚೆ ಇರುವುದನ್ನು ಗುರುತಿಸಿದ್ದರು. ಆ ಮೂಲಕ, ಅದೇನು ಎಂಬುದನ್ನು ಊಹಿಸುತ್ತಾ ನಾನಾ ರೀತಿಯ ಚರ್ಚೆಗಳು ಶುರುವಾದವು. ಆದರೆ, ಇದನ್ನು ಕೊನೆಗೆ ಜನಸಂಚಾರವಿಲ್ಲದ ವಸ್ಟಾಕ್ ದ್ವೀಪ ಎಂದು ಖಚಿತಪಡಿಸಲಾಯಿತು. ಇದು ಪೆಸಿಪಿಕ್ ಸಮುದ್ರದ ಮಧ್ಯಭಾಗದಲ್ಲಿದ್ದು, ರಿಪಬ್ಲಿಕ್ ಆಫ್ ಕಿರಿಬಾತಿ ದೇಶದ ವ್ಯಾಪ್ತಿಯಲ್ಲಿ ಬರುತ್ತದೆಂದು ಹೇಳಲಾಗಿದೆ.
ಅಷ್ಟಕ್ಕೂ ನಡೆದಿದ್ದಾದರೂ ಏನು..?
ಗೂಗಲ್ ಮ್ಯಾಪ್ ನೋಡುತ್ತಿದ್ದ ಸಮಯದಲ್ಲಿ ಒಂದು ಸೋಷಿಯಲ್ ಮೀಡಿಯಾ ಯೂಜರ್ ಒಬ್ಬ, ಪೆಸಿಪಿಕ್ ಮಹಾ ಸಮುದ್ರದ ಮಧ್ಯದಲ್ಲಿ ಒಂಧು ವಿಚಿತ್ರವಾದ ಬ್ಲ್ಯಾಕ್ ಹೋಲ್ ಇರುವುದನ್ನು ಗಮನಿಸಿದ್ದನು. ಆದರೆ ಇದು ಇತರೆ ದೇಶಗಳಿಗೆ, ದ್ವೀಪಗಳಿಗೆ ದೂರದಲ್ಲಿದ್ದಂತೆ ಕಾಣಿಸಿತ್ತು.
ಇದು ಆನ್‌ಲೈನ್‌ನಲ್ಲಿ ತುಂಬಾ ಜನರನ್ನು ಚಿಂತೆಗೆ ಹಚ್ಚಿತ್ತು. ನೆಟಿಜನ್‌ಗಳು ಅದೇನಿರಬಹುದು ಎಂದು ಊಹಿಸೋಕೆ ಶುರು ಮಾಡಿದರು. ನಾನಾ ರೀತಿಯಲ್ಲಿ ಯೋಚನೆಗಳನ್ನು ಮಾಡಿದರೆ, ಹಲವಾರು ಊಹೆಗಳನ್ನೂ ಮಾಡಿದರು. ಕೆಲವರು ಅದನ್ನು ಭೂಗರ್ಭದಲ್ಲಿರುವ ಅಗ್ನಿಪರ್ವತವೇನೋ ಎಂದು ಅನುಮಾನಪಟ್ಟರು. ಇನ್ನೂ ಕೆಲವರು ಅದು ರಹಸ್ಯ ದ್ವೀಪವಾಗಿರಬಹುದು, ಇಲ್ಲವೇ ಮಿಲಿಟರಿ ಸ್ಥಾವರ ಆಗಿರಬಹುದು ಎಂದು ಭಾವಿಸಿದರು. ಕೊನೆಗೆ ಇದು ಆಸ್ಟ್ರೇಲಿಯಾದ ಪೂರ್ವ ದಿಕ್ಕಿಗೆ ಸುಮಾರು ೪೦೦೦ ಮೈಲುಗಳ ದೂರದಲ್ಲಿರುವ ಮನುಷ್ಯರೇ ಇಲ್ಲದ ಒಂದು ದ್ವೀಪ ಎಂದು ಗುರುತಿಸಲಾಯಿತು. ಈ ದ್ವೀಪದಲ್ಲಿ ಕಟ್ಟವಾದ ಅರಣ್ಯಗಳಿವೆ. ಈ ಮರಗಳಿಂದ ದ್ವೀಪ ಹಚ್ಚಹಸಿರಾಗಿದೆ. ಆದ್ರೆ, ಆಕಾಶದಿಂದ ನೋಡಿದರೆ ಅದು ಕಡುಕಪ್ಪಾಗಿ ಕಾಣಿಸುತ್ತದೆ. ಹೀಗಾಗಿಯೇ ಗೂಗಲ್‌ನಲ್ಲಿ ನೋಡುವಾಗ ಅದು ಬ್ಲ್ಯಾಕ್ ಹೋಲ್‌ನಂತೆ ಕಾಣಿಸಿದೆ.
ಪೆಸಿಪಿಕ್ ಸಮುದ್ರದಲ್ಲಿ ವಿಸ್ತರಿಸುತ್ತಿರುವ ದ್ವೀಪಗಳು..!
ಒಂದು ಕಡೆ ಸಮುದ್ರ ಮಟ್ಟ ಏರಿಕೆಯಾಗುತ್ತಿದೆ ಎಂಬ ಭೀತಿ ಇದೆ. ಈ ನಡುವೆಯೇ ಪೆಸಿಪಿಕ್ ಮಹಾಸಾಗರದಲ್ಲಿರುವ ನೂರಾರು ದ್ವೀಪಗಳ ಪ್ರಮಾಣ ವಿಸ್ತಾರವಾಗುತ್ತಿದೆ ಎಂದು ಆಕ್ಲ್ಯಾಂಡ್ ಯೂನಿವರ್ಸಿಟಿ ಸಂಶೋಧಕರು ಗುರುತಿಸಿದ್ದಾರೆ. ಕಳೆದ ೭೦ ವರ್ಷಗಳಲ್ಲಿ ಕೆಲವು ದ್ವೀಪಗಳ ವಿಸ್ತೀರ್ಣ ಶೇಕಡಾ ೮ರಷ್ಟು ಹೆಚ್ಚಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಬದಲಾವಣೆಗಳನ್ನು ಗಮನಿಸುವುದಕ್ಕೆ ಅವರು ಸ್ಯಾಟಲೈಟ್ ಚಿತ್ರಗಳನ್ನು, ಆ ಪ್ರಾಂತ್ಯದಲ್ಲಿ ಸಿಗುವ ಮಾಹಿತಿಯನ್ನು ಪರಿಶೀಲನೆ ಮಾಡಿದ್ದಾರೆ.