BengaluruCinema

ಧ್ರುವ ಸರ್ಜಾರ ʻಕೆಡಿʼ ಚಿತ್ರಕ್ಕೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ

ಬೆಂಗಳೂರು; ಹಿರಿಯ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ಅವರು ಮತ್ತೊಂದು ಅದ್ದೂರಿ ಚಿತ್ರದಲ್ಲಿ ಬಣ್ಣ ಹಚ್ಚಿತ್ತಿದ್ದಾರೆ. ಜೋಗಿ ಪ್ರೇಮ್‌ ನಿರ್ದೇಶನದ ʻಕೆಡಿʼ ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತ ನಡೆಯಿತು. ಈ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿದ್ದು, ನಾಯಕಿಯಾಗಿ ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ಅವರನ್ನು ಫೈನಲ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಈಗಾಗಲೇ ರಾಧನಾ ರಾಮ್‌ ಜೊತೆ ಒಂದು ಹಂತದ ಮಾತುಕತೆ ನಡೆದಿದೆಯಂತೆ. ತಾಯಿ ಮಾಲಾಶ್ರೀ ಕೂಡಾ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಂದುಕೊಂಡಂತೆ ಆದರೆ ರಾಧನಾ ರಾಮ್‌ ಅವರು ಧ್ರುವ ಸರ್ಜಾಗೆ ನಾಯಕಿಯಾಗಿ ನಟನೆ ಮಾಡಲಿದ್ದಾರೆ. ರಾಧನಾ ಅವರು ಬಣ್ಣ ಹಚ್ಚಲು ರೆಡಿಯಾಗುತ್ತಿದ್ದಂತೆ ಸ್ಟಾರ್‌ ನಟರ ಜೊತೆ ನಟನೆ ಮಾಡಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ʻಕೆಡಿʼ ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ಸೇರಿದಂತೆ ಹಲವು ಸ್ಟಾರ್‌ ನಟರು ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

 

Share Post