ಹೈದರಾಬಾದ್ ಶಾಲೆಯಲ್ಲಿ ಪೈಶಾಚಿಕ ಕೃತ್ಯ; 2 ತಿಂಗಳಿಂದ 4ರ ಬಾಲೆ ಮೇಲೆ ಅತ್ಯಾಚಾರ
ಹೈದರಾಬಾದ್; ಹೈದರಾಬಾದ್ನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಶಾಲೆಯ ಪ್ರಾಂಶುಪಾಲರ ಕಾರು ಚಾಲಕ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕತೆ ಮೆರೆದಿದ್ದಾನೆ. ಹೈದರಾಬಾದ್ನ ಖಾಸಗಿ ಶಾಲೆಯೊಂದರ ಕೊಠಡಿಗೆ ನಾಲ್ಕು ವರ್ಷದ ಯುಕೆಜಿ ಓದುತ್ತಿದ್ದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಲಾಗಿದೆ. ಎರಡು ತಿಂಗಳಿಂದ ನಿರಂತರವಾಗಿ ದೌರ್ಜನ್ಯ ಎಸಗಲಾಗಿದ್ದು, ಸದ್ಯ ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಬಾಲಕಿಯ ವರ್ತನೆಯಲ್ಲಿ ಬದಲಾವಣೆ ಕಂಡಿದ್ದರಿಂದ ಪೋಷಕರು ಅನುಮಾನ ಪಟ್ಟಿದ್ದಾರೆ. ಬಾಲಕಿ ಸುಮ್ಮನೆ ಅಳೋದು ಮಾಡುತ್ತಿದ್ದಳು, ಜೊತೆಗೆ ಖಿನ್ನತೆಗೆ ಒಳಗಾಗಿದ್ದಳು. ಇದ್ರಿಂದಾಗಿ ಅನುಮಾನ ಬಂದು ವಿಚಾರಿಸಿದಾಗ, ಚಾಲಕನ ಬಗ್ಗೆ ಬಾಲಕಿ ಹೇಳಿಕೊಂಡಿದ್ದಾಳೆ. ಆರೋಪಿಯನ್ನು ರಜಿನಿಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿ ಕ್ಲಾಸ್ ರೂಮ್ಗೆ ಬಂದು ಮಕ್ಕಳಿಗೆ ತೊಂದರೆ ನೀಡುತ್ತಿದ್ದ. ಹೀಗಾಗಿ ಅವನನ್ನು ಕಂಡರೆ ಮಕ್ಕಳು ಹೆದರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಆರೋಪಿ ರಜಿನಿ ಕುಮಾರ್ನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೊಳಪಡಿಸಲಾಗಿದೆ.