ರೈಲ್ವೆ ಇಲಾಖೆಗೆ ಗುಜರಿಯಿಂದ 2,582 ಕೋಟಿ ರೂಪಾಯಿ ಆದಾಯ
ನವದೆಹಲಿ; ರೈಲ್ವೆ ಇಲಾಖೆಗೆ ಗುಜರಿ ವಸ್ತುಗಳನ್ನು ಮಾರಾಟ ಮಾಡಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಇಲಾಖೆಗೆ 2,582 ಕೋಟಿ ರೂಪಾಯಿ ಆದಾಯ ಬಂದಿದೆ. ಈ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
2021-22ನೇ ಸಾಲಿಗೆ ಹೋಲಿಸಿದರೆ ಇದರಲ್ಲಿ ಶೇಕಡಾ 28ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 2003 ಕೋಟಿ ರೂಪಾಯಿ ಹಣ ಗುಜರಿಯಿಂದ ಸಂಗ್ರಹವಾಗಿತ್ತು. ರೈಲ್ವೆಯ ಗುಜರಿ ವಸ್ತುಗಳನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಿ ಪಾರದರ್ಶಕವಾಗಿ ವಹಿವಾಟು ನಡೆಸಲಾಗಿತ್ತು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದಾರೆ.