EconomyNational

ಗೋಧಿ ಸೇರಿ ಆರು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

ನವದೆಹಲಿ; ಹಿಂಗಾರು ಬೆಳೆಗಳಲ್ಲಿ ಒಂದಾದ ಗೋಧಿ ಸೇರಿದಂತೆ ಆರು ಪ್ರಮುಖ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಜಾಸ್ತಿ ಮಾಡಿ ಆದೇಶ ಹೊರಡಿಸಿದೆ. ಗೋಧಿಗೆ 110 ರೂಪಾಯಿ, ಬಾರ್ಲಿಗೆ 100 ರೂಪಾಯಿ, ಬೇಳೆ 105 ರೂಪಾಯಿ, ಮಸೂರ್ (ಬೆಳೆ) 500 ರೂಪಾಯಿ, ಸಾಸಿವೆ 400 ರೂಪಾಯಿ, ಸೂರ್ಯಕಾಂತಿಗೆ 209 ರೂಪಾಯಿ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ.
ಇದರಿಂದಾಗಿ ಗೋಧಿಗೆ 2125 ರೂಪಾಯಿ ಸಿಗಲಿದೆ. ಗೋಧಿ ಉತ್ಪಾದನಾ ವೆಚ್ಚವನ್ನು ಪ್ರತಿ ಕ್ವಿಂಟಲ್‌ಗೆ 1,065 ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ಈ ಋತುವಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಒಟ್ಟು 23 ಬೆಳೆಗಳಿಗೆ ಬೆಂಬಲ ಘೋಷಣೆ ಮಾಡಲಾಗಿದೆ. ದೇಶದ ಲಕ್ಷಾಂತರ ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

Share Post