ನಟಿ ಶೆಹನಾಜ್ ಗಿಲ್ ತಂದೆಗೆ ಕೊಲೆ ಬೆದರಿಕೆ
ಪಂಜಾಬ್; ನಟಿ ಶೆಹನಾಜ್ ಗಿಲ್ ತಂದೆ ಸಂತೋಖ್ ಸಿಂಗ್ ಅವರಿಗೆ ಅಪರಿಚಿತ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆ. ಮೊಬೈಲ್ ಕರೆ ಮಾಡಿರುವ ಅನಾಮಿಕ, ದೀಪಾವಳಿ ಒಳಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಶೆಹನಾಜ್ ಗಿಲ್ ಅವರ ತಂದೆಗೆ ಬಿಯಾಸ್‌ನಿಂದ ತರಂತನ್‌ಗೆ ಹೋಗುತ್ತಿದ್ದ ವೇಳೆ ಈ ಬೆದರಿಕೆ ಕರೆ ಬಂದಿದೆ. ವರದಿಗಳ ಪ್ರಕಾರ, ಅಪರಿಚಿತ ವ್ಯಕ್ತಿ ಮೊದಲು ಸಂತೋಖ್ ಅವರನ್ನು ನಿಂದಿಸಿದ್ದು, ನಂತರ ನಿಮ್ಮ ಮನೆಗೆ ನುಗ್ಗಿ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಘಟನೆ ನಂತರ ಸಂತೋಖ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2021ರಲ್ಲಿ ಕೂಡಾ ಸಂತೋಖ್ ಸಿಂಗ್ ಸುಖ್ ಅವರನ್ನು ಕೊಲ್ಲಲು ಯತ್ನಿಸಲಾಗಿತ್ತು. 2021ರ ಡಿಸೆಂಬರ್ 25ರಂದು, ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಸಂತೋಖ್ ಮೇಲೆ ಗುಂಡು ಹಾರಿಸಿದ್ದರು.