National

ಇಂದು ಪಂಜಾಬ್‌ಗೆ ಸ್ವಾತಂತ್ರ್ಯ ಸಿಕ್ಕಿದೆ- ಮುಂದೊಂದು ದಿನ ಇಡೀ ಭಾರತಕ್ಕೆ ಸ್ವಾತಂತ್ರ್ಯ ಸಿಗಲಿದೆ-ಕೇಜ್ರಿವಾಲ್

ದೆಹಲಿ: ಪಂಜಾಬ್‌ನಲ್ಲಿ ಆಪ್‌ ಜಯಭೇರಿ ಸಾಧಿಸಿರುವುದರಿಂದ ದೆಹಲಿಯ ಆಪ್‌ ಕಚೇರಿಯಲ್ಲಿ ವಿಜಯದ ಭಾಷಣವನ್ನು ಮಾಡಿದ ಅರವಿಂದ್‌ ಕೇಜ್ರಿವಾಲ್‌ ಇಂದು ಪಂಜಾಬ್‌ಗೆ ಸ್ವಾತಂತ್ರ್ಯ ಸಿಕ್ಕಿದೆ ಮುಂದೊಂದು ದಿನ ಇಡೀ ಭಾರತಕ್ಕೆ ಸ್ವಾತಂತ್ರ್ಯ ಸಿಗಲಿದೆ ಎಂದರು. ಈಗಿನ ಪರಿಸ್ಥಿತಿಯನ್ನು ಬದಲಾಯಿಸಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು. ಪಂಜಾಬ್ ರಾಜ್ಯದಲ್ಲಿ ಎಎಪಿಗೆ ಅಧಿಕಾರ ನೀಡಿದ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದರು. ಎಲ್ಲರೂ ಆಪ್‌ ಪಕ್ಷದ ಜೊತೆ ಸೇರಿ ಭಾರತವನ್ನು ಶೋಷಣೆಯಿಂದ ಪಾರು ಮಾಡಬೇಕು ಎಂದು ಸಲಹೆ ನೀಡಿದರು.

ತಮ್ಮ ಪಕ್ಷವು ಯಾವುದೇ ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸುತ್ತಿದೆ ಮತ್ತು ಎಎಪಿ ಸರ್ಕಾರವು ಬಡ ಚಿಕ್ಕ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ಹಲವು ಯತ್ನಗಳು ಮತ್ತು ಪಿತೂರಿ ಕೂಡ ನಡೆಸಿದ್ರು. ಜೊತೆಗೆ ನನ್ನನ್ನು (ಕೇಜ್ರಿವಾಲ್) ಭಯೋತ್ಪಾದಕ ಎಂದು ಬಣ್ಣಿಸಲಾಗಿತ್ತು.  ಆದರೆ ನಾನು ಭಯೋತ್ಪಾದಕ ಅಲ್ಲ ಎಂಬುದನ್ನು ಜನರು ಸಾಬೀತುಪಡಿಸಿದ್ದಾರೆ. ಭಾರತವನ್ನು ದೋಚಿಕೊಂಡು ತಿನ್ನುತ್ತಿರುವವರು ಭಯೋತ್ಪಾದಕರು ಎಂದು ಟೀಕಿಸಿದ್ದಾರೆ. ನವ ಭಾರತ ನಿರ್ಮಾಣವಾಗಬೇಕು ಮತ್ತು ಅದಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಶ್ರಮಿಸಬೇಕು ಎಂದರು.

ಬ್ರಿಟಿಷರನ್ನು ತೊಲಗಿಸಿದರೆ ಸಾಲದು ಇಲ್ಲಿನ ವ್ಯವಸ್ಥೆಯನ್ನು ಸಹ ಬದಲಾವಣೆ ಮಾಡಬೇಕೆಂಬ ಭಗತ್‌ ಸಿಂಗ್‌ ಅವರ ಮಾತನ್ನು ನೆನಪು ಮಾಡಿಕೊಂಡರು.  ಆಸ್ಪತ್ರೆ, ಶಾಲೆಗಳನ್ನು ನಿರ್ಮಿಸದೆ ದೇಶವನ್ನು ದರೋಡೆ ಮಾಡುತ್ತಿದ್ದು, ಜನರನ್ನು ಸುಲಿಗೆ ಮಾಡಲಾಗುತ್ತಿದೆ. ಪ್ರಸಕ್ತ ಚುನಾವಣೆಯಲ್ಲಿ ಬಾದಲ್, ಚನ್ನಿ, ಕ್ಯಾಪ್ಟನ್ ಕೂಡ ಸೋತಿದ್ದಾರೆ ಎಂದು ವ್ಯಂಗ್ಯವಾಡಿದ್ರು.

Share Post