Districts

ಕೆಆರ್‌ಎಸ್‌ನಿಂದ 80 ಸಾವಿರ ಕ್ಯುಸೆಕ್‌ ಹೊರಕ್ಕೆ; ವೇಣುಗೋಪಾಲ ದೇಗುಲ ಮುಳುಗಡೆ

ಮಂಡ್ಯ; ಕೆಆರ್‌ಎಸ್‌ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದೆ. ಡ್ಯಾಂ ತುಂಬಲು ಇನ್ನು ಮುಕ್ಕಾಲು ಟಿಎಂಸಿ ನೀರಷ್ಟೇ ಬೇಕಾಗಿದೆ. ಈ ನಡುವೆ ಡ್ಯಾಂನಿಂದ 80,320 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಪ್ರಾತ್ರದ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಶ್ರೀರಂಗಪಟ್ಟಣದ ಪಶ್ವಿಮ ವಾಹಿನಿ ಬಳಿಯ ವೇಣುಗೋಪಾಲ ಸ್ವಾಮಿ ದೇಗುಲದ ಗರ್ಭ ಗುಡಿಗೆ ನೀರು ನುಗ್ಗಿದೆ.

  ಶ್ರೀರಂಗಪಟ್ಟಣದ ಸೇತುವೆ ಬಳಿ ಇರುವ ಸಾಯಿ ಮಂದಿರ ಬಹುತೇಕ ಮುಳುಗಡೆಯಾಗಿದೆ. ಗಂಜಾಮ್ ಬಳಿಯ ಪ್ರಸಿದ್ಧ ನಿಮಿಷಾಂಭ ದೇಗುಲದ ಬಾಗಿಲವರೆಗೂ ನೀರು ತುಂಬಿದೆ. ಹೀಗಾಗಿ ದೇಗುಲ ಬಂದ್ ಮಾಡಿ ಬ್ಯಾರಿಕೇಡ್ ಅಳವಡಿಸಲಾಗಿದೆ. ದೇಗುಲದ ಬಳಿಗೆ ಭಕ್ತರ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ.

ಕೆಆರ್‌ಎಸ್ ಡ್ಯಾಂ ಬಹುತೇಕ‌ ಭರ್ತಿಯಾಗಿದ್ದು ಅಪಾರ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ. 124.80 ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯಕ್ಕೆ 123.40 ಅಡಿ ನೀರಿದೆ. 72,646 ಕ್ಯೂಸೆಕ್ ನೀರು ಒಳ ಹರಿವಿದೆ.

Share Post