International

ಕಾಟ್ಸಾ ಕಾಯ್ದೆಯಿಂದ ಭಾರಕ್ಕೆ ವಿನಾಯಿತಿ ನೀಡಿದ ಅಮೆರಿಕ; ತಿದ್ದುಪಡಿ ಮಸೂದೆ ಅಂಗೀಕಾರ

ವಾಷಿಂಗ್ಟನ್; ರಷ್ಯಾದಿಂದ ಭಾರತ ಸರ್ಕಾರ ಖರೀದಿ ಮಾಡುತ್ತಿರುವ ಎಸ್‌–400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಿಎಎಟಿಎಸ್ಎ ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಅಂಗೀಕರಿಸಲಾಗಿದೆ. ಧ್ವನಿಮತದ ಮೂಲಕ ಗುರುವಾರ ಅಂಗೀಕಾರ ಸಿಕ್ಕಿದೆ.

ಇಂಡೋ ಅಮೆರಿಕನ್‌ ಕಾಂಗ್ರೆಸ್ ಸದಸ್ಯ ರೋ ಖನ್ನಾ ಅವರು ತಿದ್ದುಪಡಿ ಮಸೂದೆ ಮಂಡಿಸಿದರು. ಇದನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು. ಈ ತಿದ್ದುಪಡಿ ಕಾಯ್ದೆ ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ಕಾಟ್ಸಾ ವಿನಾಯಿತಿಯನ್ನು ಭಾರತಕ್ಕೆ ಒದಗಿಸಲು ಬೈಡನ್ ಆಡಳಿತ ಅನುವು ಮಾಡಿಕೊಡುತ್ತದೆ.
ಚೀನಾದಿಂದ ಹೆಚ್ಚುತ್ತಿರುವ ಆಕ್ರಮಣವನ್ನು ಎದುರಿಸುತ್ತಿರುವ ಭಾರತದೊಂದಿಗೆ ಅಮೆರಿಕ ನಿಲ್ಲಬೇಕು. ಭಾರತ ಕಾಕಸ್‌ನ ಉಪಾಧ್ಯಕ್ಷನಾಗಿ, ನಾನು ನಮ್ಮ ದೇಶಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಭಾರತೀಯ ಚೀನಾದ ಗಡಿಯಲ್ಲಿ ಭಾರತವು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇನೆ ಎಂದು ಸಂಸದ ರೋ ಖನ್ನಾ ಇದೇ ವೇಳೆ ಹೇಳಿದ್ದಾರೆ.

Share Post