Districts

ನಿಮ್ಮ ಪರಿಹಾರ ನಮಗೆ ಬೇಡ; ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಮಹಿಳೆ..!!

ಬಾಗಲಕೋಟೆ; ಬದಾಮಿ ತಾಲ್ಲೂಕಿನ ಕೆರೂರಿನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಮಾಜಿ ಸಿಎಂ ಹಾಗೂ ಸ್ಥಳೀಯ ಶಾಸಕ ಸಿದ್ದರಾಮಯ್ಯ ಅವರು ಇಂದು ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು, ನಾಲ್ವರು ಗಾಯಾಳುಗಳಿಗೆ ತಲಾ 25000 ರೂಪಾಯಿ ನೀಡಿದ್ದಾರೆ. ಈ ವೇಳೆ ಸಂತ್ರಸ್ತರ ಕುಟುಂಬದ ಮಹಿಳೆಯೊಬ್ಬರು ನಿಮ್ಮ ಪರಿಹಾರ ನಮಗೆ ಬೇಡ ಎಂದು ಸಿದ್ದರಾಮಯ್ಯ ಅವರ ಕಾರಿನ ಮೇಲೆ ಹಣವನ್ನು ಎಸೆದ ಘಟನೆ ನಡೆದಿದೆ. 

ಕುಳಗೇರಿ ಕ್ರಾಸ್ ಡಾಬಾ ಬಳಿ ನಡೆದ ಹಲ್ಲೆಯಲ್ಲಿ ಮಹಮ್ಮದ್ ಹನೀಫ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಸಿದ್ದರಾಮಯ್ಯ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸಂತ್ರಸ್ತರಿಗೆ ಅವರು    2 ಲಕ್ಷ ರೂಪಾಯಿಯನ್ನು ನೀಡಿದರು. ಆದರೆ ನಮಗೆ ಹಣ ಬೇಡ. ಶಾಂತಿ ಬೇಕು ಎಂದು ಗಾಯಾಳು ಕುಟುಂಬದ ಮಹಿಳೆ ರಜ್ಮಾ ಎಂಬುವವರು ಸಿದ್ದರಾಮಯ್ಯ ಅವರ ಕಾರಿನ ಮೇಲೆ ನೋಟುಗಳನ್ನು ಎಸೆದಿದ್ದಾರೆ.

ಘಟನೆ ನಡೆದು ಇಷ್ಟು ದಿನವಾದರೂ ಯಾರು ಬಂದು ನಮ್ಮನ್ನು ಮಾತನಾಡಿಸಿಲ್ಲ. ಸಚಿವರು ಬಂದರೂ ಕೆಲವರನ್ಮಷ್ಟೇ ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

 

 

Share Post