ಡ್ರೋನ್ ಮೂಲಕ ಹೆರಾಯಿನ್ ರವಾನೆ; ಇದು ಪಾಕಿಸ್ತಾನದ ಕುತಂತ್ರ
ಅಮೃತಸರ: ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತಕ್ಕೆ ಹೆರಾಯಿನ್ ಸಪ್ಲೈ ಮಾಡುತ್ತಿದ್ದು, ಇಂದು ಅಂತ ಒಂದು ಡ್ರೋನ್‌ನನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ. ಆ ಡ್ರೋನ್‌ಗೆ ಕಟ್ಟಲಾಗಿದ್ದ ಸುಮಾರು ಹತ್ತು ಕೆಜಿಯಷ್ಟೆ ಹೆರಾಯಿನ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇಂದು ಮುಂಜಾನೆ ಪಂಜಾಬ್‌ನ ಅಮೃತಸರದ ಅಂತರಾಷ್ಟ್ರೀಯ ಗಡಿಯ ಸಮೀಪ ಡ್ರೋನ್ ಬರುತ್ತಿರುವ ಮಾಹಿತಿ ಅರಿತ ಗಡಿ ಭದ್ರತಾ ಪಡೆ ಸಿಬ್ಬಂದಿ, ಡ್ರೋನ್‌ನ್ನು ಹೊಡೆದುರುಳಿಸಿದರು. ಪರಿಶೀಲನೆ ಮಾಡಿದಾಗ ಅದ್ರಲ್ಲು ಹತ್ತು ಕೆಜಿಯಷ್ಟು ಹೆರಾಯಿನ್ ಇರುವುದು ಪತ್ತೆಯಾಗಿದೆ. 9 ಪೊಟ್ಟಣಗಳಲ್ಲಿ 10.670 ಕೆ.ಜಿ ಹೆರಾಯಿನ್ ಅನ್ನು ಡ್ರೋನ್ ಮೂಲಕ ಸಾಗಿಸಲಾಗುತ್ತಿತ್ತು ಎಂದು ಬಿಎಸ್‌ಎಫ್ ಟ್ವೀಟ್ ಮಾಡಿದೆ. ಪಂಜಾಬ್‌ನಲ್ಲಿ ಭಾರತ ಪಾಕಿಸ್ತಾನದೊಂದಿಗೆ 553 ಕಿ.ಮೀ ಗಡಿಯನ್ನು ಹಂಚಿಕೊಂಡಿದ್ದು, ಇದಕ್ಕೆ 135 ಬಿಎಸ್‌ಎಫ್ ಪಡೆಗಳ ನಿಗಾ ಇದೆ.