ಸ್ವಾತಂತ್ರ್ಯ ಹೋರಾಟಗಾರನ ಪುತ್ರಿಯ ಕಾಲು ಮುಟ್ಟಿ ನಮಸ್ಕರಿಸಿದ ಮೋದಿ
ಅಮರಾವತಿ; ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಪಸಲ ಕೃಷ್ಣ ಮೂರ್ತಿ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕೃಷ್ಣ ಮೂರ್ತಿ ಅವರ ಮಗಳ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.
ಪಸಲ ಕೃಷ್ಣ ಮೂರ್ತಿ ಅವರ 90 ವರ್ಷದ ಪುತ್ರಿ ಪಸಲ ಭಾರತಿ, ಅವರ ಸಹೋದರಿ ಹಾಗೂ ಸೊಸೆಯನ್ನು ಮೋದಿ ಭೇಟಿ ಮಾಡಿದರು. ಈ ವೇಳೆ ಮೋದಿ ಭಾರತಿಯವರ ಕಾಲನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ವ್ಹೀಲ್ ಚೇರ್ನಲ್ಲಿ ಕುಳಿತಿರುವ ಭಾರತಿ ಅವರ ಕಾಲನ್ನು ಮುಟ್ಟಿ ನಮಸ್ಕರಿಸುತ್ತಿರುವ ಮೋದಿಯವರ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.