Bengaluru

ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ಪಿಲ್ಲರ್‌ಗೆ ಬಸ್‌ ಡಿಕ್ಕಿ; ನಾಲ್ವರು ಗಂಭೀರ

ಬೆಂಗಳೂರು: ಬೆಂಗಳೂರಿನ ರಸ್ತೆಗಳಿಗೂ ಗುಂಡಿಗಳಿಗೂ ಅವಿನಾಭಾವ ಸಂಬಂಧ. ಇಲ್ಲಿ ಗುಂಡಿ ಇಲ್ಲದೆ ರಸ್ತೆ ಇರೋದಿಲ್ಲ, ರಸ್ತೆ ಇಲ್ಲದೆ ಗುಂಡಿ ಕೂಡಾ ಇರೋದಿಲ್ಲ. ಅಷ್ಟು ದೋಸ್ತಿ ಇವರೆಡಕ್ಕೂ. ಹೀಗಾಗಿಯೇ ಇಲ್ಲಿ ಆಕ್ಸಿಡೆಂಟ್‌ಗಳು ಕಾಮನ್‌. ಇವತ್ತೂ ಕೂಡಾ ಗುಂಡಿ ಕಾರಣಕ್ಕಾಗಿ ಒಂದು ಆಕ್ಸಿಡೆಂಟ್‌ ನಡೆದುಹೋಗಿದೆ. ಗುಂಡಿ ತಪ್ಪಿಸಲು ಹೋಗಿ ಸರ್ಕಾರ ಬಸ್‌ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ.

ಈ ಘಟನೆ ನಡೆದಿರೋದು ಕೆಂಗೇರಿ ಬಳಿ. ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಗುಂಡಿ ತಪ್ಪಿಸಲು ಹೋಗಿದ್ದಾನೆ. ಈ ವೇಳೆ ಬಸ್‌ ನಿಯಂತ್ರಣ ತಪ್ಪಿದ್ದು, ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ 25 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆ.ಆರ್‌. ನಗರ ಡಿಪೊಗೆ ಸೇರಿದ ಬಸ್‌, ಮಡಿಕೇರಿಯಿಂದ ನಗರಕ್ಕೆ ಬರುತ್ತಿದ್ದಾಗ ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ ಬಳಿಯ ಮೆಟ್ರೊ ಪಿಲ್ಲರ್ ನಂಬರ್‌ 545ಕ್ಕೆ ಡಿಕ್ಕಿಯಾಗಿದೆ. ರಾತ್ರಿ 1.30ರ ಸುಮಾರಿಗೆ ಈ ಘಟನೆ ನಡೆದಿದೆ.

Share Post