National

ದೇಶದ ಸಮಸ್ತ ಜನತೆಗೆ ಹೋಳಿ ಶುಭಾಷಯಗಳು: ಟ್ವೀಟ್‌ ಮಾಡಿ ಶುಭಾಷಯ ತಿಳಿಸಿದ ಮೋದಿ, ಅಮಿತ್‌ ಶಾ

ದೆಹಲಿ:  ದೇಶದ ಜನಪ್ರಿಯ ಹಬ್ಬಗಳಲ್ಲಿ ಹೋಳಿ ಹಬ್ಬವೂ ಒಂದು. ಈ ಹಬ್ಬವನ್ನು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ಹೋಳಿ ಹಬ್ಬವು ಹೋಲಿಕಾ ದಹನದಿಂದ ಪ್ರಾರಂಭವಾಗುತ್ತದೆ. ಮಾರ್ಚ್ 18 ರಂದು (ಶುಕ್ರವಾರ) ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಈ ಹಬ್ಬ ಎಲ್ಲರ ಬಾಳಿನಲ್ಲಿ ಸಂತಸ ತುಂಬಲಿ ಎಂದು ಹಾರೈಸಿದರು. ‘ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಪ್ರೀತಿ, ವಾತ್ಸಲ್ಯ ಮತ್ತು ಭ್ರಾತೃತ್ವದ ಸಂಕೇತವಾಗಿರುವ ಈ ವರ್ಣರಂಜಿತ ಹಬ್ಬವು ಎಲ್ಲರ ಜೀವನದಲ್ಲಿ ಸಂತೋಷವನ್ನು ತರಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಹೋಳಿ ಆಚರಣೆಯಲ್ಲಿ ಪಾಲ್ಗೊಂಡು ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿಯನ್ನು ತುಂಬಲು ಬಣ್ಣಗಳ ಜೊತೆಗೆ ಸಂತೋಷ, ಶಾಂತಿ ಮತ್ತು ಅದೃಷ್ಟವನ್ನು ತರಲಿ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

Share Post