HIJAB CONTROVERSY: ವಿಜಯವಾಡದ ಕಾಲೇಜಿನಲ್ಲಿ ಹಿಜಾಬ್‌ಗೆ ಬ್ರೇಕ್
ವಿಜಯವಾಡ (Vijaywada): ಆಂಧ್ರಪ್ರದೇಶದಲ್ಲೂ ಹಿಜಾಬ್ ವಿವಾದ (HIJAB CNTROVERSY) ಕಾಲಿಟ್ಟಿದೆ. ಆಂಧ್ರಪ್ರದೇಶದ ವಿಜಯವಾಡದ ಖಾಸಗಿ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಿಸಲು ನಿರಾಕರಿಸಲಾಗಿದೆ.
ವಿಜಯವಾಡದ ಲೋಯೋಲಾ ಕಾಲೇಜಿಗೆ ಇಂದು ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ತಡೆಯಲಾಗಿದೆ. ಇದಕ್ಕೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಜಾಬ್ ಇರುವ ಛಾಯಾಚಿತ್ರದೊಂದಿಗೆ ತಮ್ಮ ಗುರುತಿನ ಚೀಟಿಯನ್ನು ತೋರಿಸುತ್ತಿದ್ದಾರೆ. ಮೊದಲಿನಿಂದಲೂ ಹಿಜಾಬ್‌ನೊಂದಿಗೆ ಕಾಲೇಜಿಗೆ ಹಾಜರಾಗುತ್ತಿದ್ದೆವು. ಆದರೆ ಈಗ, ಹಿಜಾಬ್‌ನೊಂದಿಗೆ ಕಾಲೇಜಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.