Districts

ಮುಸ್ಲಿಮರೆಲ್ಲಾ ಕೆಟ್ಟವರಲ್ಲ, ಹಿಂದೂಗಳೆಲ್ಲಾ ಒಳ್ಳೆಯವರಲ್ಲ; ವಸತಿ ಸಚಿವ ವಿ.ಸೋಮಣ್ಣ

ಚಾಮರಾಜನಗರ: ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಮುಸ್ಲಿಮರು ಕೂಡಾ ನೋಡುತ್ತಿದ್ದಾರೆ. ಅಂದರೆ ಎಲ್ಲಾ ಮುಸ್ಲಿಮರೂ ಕೆಟ್ಟವರಲ್ಲ, ಎಲ್ಲಾ ಹಿಂದೂಗಳೂ ಒಳ್ಳೆಯವರಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಚಾಮರಾಜನಗರದ ಕೊಳ್ಳೆಗಾಲದಲ್ಲಿ ಮಾತನಾಡಿರುವ ಅವರು, ಕಾಶ್ಮೀರಕ್ಕೆ ನಾನೂ ಹಲವು ಬಾರಿ ಹೋಗಿದ್ದೇನೆ. ಅದು ಹೇಗಿದೆ ಎಂಬುದು ಗೊತ್ತಿದೆ. ಹಿಂದೆ ನಡೆದ ವಾಸ್ತವವನ್ನು ಜನರ ಮುಂದೆ ಸಿನಿಮಾ ಇಟ್ಟಿದೆ. ಇದು ಇತಿಹಾಸ. ಮುಂದೆ ಇದು ನಡೆಯಬಾರದು ಎಂದು ಹೇಳಿದರು.

ಶಾಲಾ ಪಠ್ಯಗಳಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಶಾಲಾ ಪಠ್ಯದಲ್ಲಿ ಏನಿರಬೇಕು ಎಂಬುದನ್ನು ತೀರ್ಮಾನಿಸಲು ಒಂದು ಸಮಿತಿ ಇದೆ. ಈ ಸಮಿತಿ ಶಿಫಾರಸಿನ ನಂತರ ಸರ್ಕಾರ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ನಿರ್ಧರಿಸುತ್ತದೆ ಎಂದು ಹೇಳಿದರು.

Share Post