ಹಿಮಪಾತಕ್ಕೆ ಸಿಲುಕಿ ಕೊಡಗು ಮೂಲದ ಯೋಧ ಹುತಾತ್ಮ-ಸಿಎಂ ಶ್ರದ್ಧಾಂಜಲಿ
ಕೊಡಗು: ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ದರಿರುತ್ತಾರೆ. ದೇಶದ ಜನರಿಗಾಗಿ ಗಡಿಯಲ್ಲಿ ಕಾಯುವ ಯೋಧರಿಗೆ ಯಾವುದೇ ರಕ್ಷಣೆ ಇರುವುದಿಲ್ಲ. ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಅದೆಷ್ಟೋ ಯೋಧರು ಕೊನೆಯುಸಿರೆಳೆದಿದ್ದಾರೆ. ಅದರಲ್ಲಿ ಇತ್ತೀಚೆಗೆ ಹಿಮಪಾತಕ್ಕೆ ಸಿಲುಕಿ ನೂರಾರು ಯೋಧರು ಪ್ರಾಣ ತೆತ್ತಿದ್ದಾರೆ. ಇಂದು ಕೂಡ ಕರ್ನಾಟಕದ ಕೊಡಗು ಮೂಲದ ಯೋಧನೊಬ್ಬ ಹಿಪಾತದಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಯೋಧನ ಪ್ರಾಣತ್ಯಾಗಕ್ಕೆ ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕಳೆದ 19 ವರ್ಷಗಳಿಂದ AOC ರಿಜಿಮೆಂಟ್ ನಲ್ಲಿ ಹವಾಲ್ದಾರ್ ಆಗಿ ಸೇವೆಯಲ್ಲಿದ್ದ ಕೊಡಗು ಜಿಲ್ಲೆ ವಿರಾಜಪೇಟೆ ಮೂಲದ ವೀರ ಯೋಧ ಅಲ್ತಾಫ್ ಅಹ್ಮದ್ ಕರ್ತವ್ಯದಲ್ಲಿದ್ದಾಗಲೇ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾಗಿರುವುದು ದುಃಖ ತಂದಿದೆ. ದೇಶ ಸೇವೆ ಮಾಡುತ್ತಲೇ ಪ್ರಾಣ ತ್ಯಾಗ ಮಾಡಿದ ಅಮರ ಯೋಧನಿಗೆ ಅನಂತ ಪ್ರಣಾಮಗಳು.

ಜೈ ಹಿಂದ್! pic.twitter.com/W31tG7vNKV
— Basavaraj S Bommai (@BSBommai) February 25, 2022