International

UKRAINE-RUSSIA WAR; ಪೋಲೆಂಡ್‌ಗೆ ತೆರಳುತ್ತಿರುವ ಭಾರತೀಯ ವಿದ್ಯಾರ್ಥಿಗಳು; ಕಾಲ್ನಡಿಗೆ ಪಯಣ

ಕೀವ್: ಉಕ್ರೇನ್‌ನಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಹೇಗಾದರೂ ಭಾರತಕ್ಕೆ ಹಿಂದಿರುಗಲು ಭಾರತೀಯ ವಿದ್ಯಾರ್ಥಿಗಳು ತವಕಿಸುತ್ತಿದ್ದಾರೆ. ಇದೇ ಕಾರಣಕ್ಕೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೋಲೆಂಡ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಸ್ವಲ್ಪ ಆಹಾರ ಪದಾರ್ಥಗಳನ್ನು ಬ್ಯಾಗ್‌ಗಳಿಗೆ ತುಂಬಿಕೊಂಡು ನಡೆದುಕೊಂಡೇ ಪೋಲೆಂಡ್‌ ಕಡೆ ನಡೆಯುತ್ತಿದ್ದಾರೆ.

40 ಮಂದಿ ಭಾರತದ ವೈದ್ಯಕೀಯ ವಿದ್ಯಾರ್ಥಿಗಳು ಪೋಲೆಂಡ್ ಗಡಿಯತ್ತ ತೆರಳುತ್ತಿದೆ.‌ ಈ ವಿದ್ಯಾರ್ಥಿಗಳನ್ನು ಕಾಲೇಜು ಬಸ್ಸಿನ ಮೂಲಕ ಗಡಿಯಿಂದ 8 ಕಿಲೋ ಮೀಟರ್‌ ದೂರದವರೆಗೂ ಬಿಡಲಾಗಿದೆ. ಅಲ್ಲಿಂದ ಅವರು ಕಾಲ್ನಡಿಗೆ ಮೂಲಕ ಗಡಿಯತ್ತ ತೆರಳುತ್ತಿದ್ದಾರೆ. ಪೋಲೆಂಡ್ ಗಡಿ ಭಾರತೀಯರಿಗೆ ಮುಕ್ತವಾಗಿದೆ ಎನ್ನಲಾಗಿದೆ. ಪೋಲೆಂಡ್‌ ಪ್ರವೇಶಿಸಿದ ನಂತರ, ವಿದ್ಯಾರ್ಥಿಗಳು ವಿಮಾನದ ಮೂಲಕ ಭಾರತಕ್ಕೆ ವಾಪಸ್ಸಾಗಲಿದ್ದಾರೆ.

Share Post