Fodder Scam; ಲಾಲೂ ಪ್ರಸಾದ್ ಯಾದವ್ಗೆ 5 ವರ್ಷ ಜೈಲು
ನವದೆಹಲಿ: ಐದನೇ ಹಾಗೂ ಅಂತಿಮ ಮೇವು ಹಗರಣದ ದೋಷಿ ಲಾಲೂ ಪ್ರಸಾದ್ ಯಾದವ್ಗೆ ಐದು ವರ್ಷ ಜೈಲು ಹಾಗೂ 60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಮೊನ್ನೆಯಷ್ಟೇ ಪ್ರಕರಣದಲ್ಲಿ ಲಾಲೂ ದೋಷಿ ಎಂದು ಪ್ರಕಟಿಸಿದ್ದ ರಾಂಚಿ ಸಿಬಿಐ ವಿಶೇಷ ನ್ಯಾಯಾಲಯ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಇದುವರೆಗೆ 950 ಕೋಟಿ ರೂಪಾಯಿಗಳ ಮೇವು ಹಗರಣ ಸಂಬಂಧ 5 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 4 ಪ್ರಕರಣಗಳಲ್ಲಿ ಲಾಲು ಯಾದವ್ ದೋಷಿ ಎಂದು ಈಗಾಗಲೇ ಸಾಬೀತಾಗಿತ್ತು. ಐದನೇ ಪ್ರಕರಣದಲ್ಲೂ ಈಗ ಅವರಿಗೆ ಶಿಕ್ಷೆಯಾಗಿದೆ.
1996 ರಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ನಕಲಿ ವೆಚ್ಚದ ವರದಿಯನ್ನು ಸಲ್ಲಿಸಿದಾಗ ಈ ವಿಷಯವು ಬೆಳಕಿಗೆ ಬಂದಿತ್ತು. ಡೊರಂಡಾ ಖಜಾನೆಯಿಂದ ಕೋಟ್ಯಂತರ ರೂಪಾಯಿ ಹಣ ಹಿಂಪಡೆದು ಪರಿಶೀಲನೆ ಮಾಡದೆ ನಕಲಿ ಖರ್ಚು ತೋರಿಸಲಾಗಿತ್ತು.