Cinema

ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ʻಪುಷ್ಪʼ ಪುಷ್ಪರಾಜ್‌-ಚಿತ್ರತಂಡ ಸಂತಸ

ಹೈದರಾಬಾದ್:‌  ಪುಷ್ಪಾ .. ಪುಷ್ಪರಾಜ್ .. ತಗ್ಗೆದೆಲೆ ಎಂದು ಸುಕುಮಾರ್ ಬನ್ನಿ ಬಾಯಲ್ಲಿ ಈ ಡೈಲಾಗ್ ಹೇಳಿಸಿದ್ರೋ ಗೊತ್ತಿಲ್ಲ… ಬನ್ನಿ ಸ್ಟಾರ್‌ ರೂಟೇ ಬದಲಾವಣೆ ಆಗಿದೆ. ಈ ಚಿತ್ರ ಅಲ್ಲು ಅರ್ಜುನ್ ಅವರನ್ನ ಪ್ಯಾನ್ ಇಂಡಿಯಾ ಸ್ಟಾರ್‌ಅನ್ನಾಗಿ ಮಾಡಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿಯೂ ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಅದರಲ್ಲೂ ಉತ್ತರ ಭಾರತ ಬಾಲಿವುಡ್‌ನಲ್ಲಿ ಬನ್ನಿಯನ್ನು ಸ್ಪೆಷಲ್ ಸ್ಟಾರ್ ಆಗಿ ಮಾಡಿದೆ.

ಕಳೆದ ವರ್ಷ ಡಿಸೆಂಬರ್ 17 ರಂದು ವಿಶ್ವಾದ್ಯಂತ ಥಿಯೇಟರ್ ಗಳಲ್ಲಿ ತೆರೆಕಂಡಿದ್ದ ಪುಷ್ಪರಾಜ್ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ಬಂದರೂ ಕೂಡ  ಹಿನ್ನಡೆಯಾಗದೆ, ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಥೀರವಾಗಿ ನಿಂತಿದೆ.   ಇನ್ನು ಈ ಸಿನಿಮಾ ಹಾಡುಗಳು ಜನರ ಬಾಯಲ್ಲಿ ನಲಿದಾಡುತ್ತಿವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹಾಡುಗಳು, ಡೈಲಾಗ್‌ಗಳಿರುವ ಮೀಮ್‌ಗಳು, ಶಾರ್ಟ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಚಿತ್ರ ಬಿಡುಗಡೆಯಾದಾಗಿನಿಂದ ಪುಷ್ಪ ಈ ವರ್ಷ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವುದ ಖಚಿತ ಎಂದು ವಿಶ್ಲೇಷಕರು ಹೇಳಿದ್ರು. ಅದರಂತೆ ಈಗ ಮೊದಲ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2022 ಪ್ರಶಸ್ತಿಯನ್ನು ಪುಷ್ಟ ಸಿನಿಮಾ ಮುಡಿಗೇರಿಸಿಕೊಂಡಿದೆ. ಪ್ರಶಸ್ತಿ ಬಂದಿರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ʻಪುಷ್ಪ ದಿ ರೂಲ್ʼ  ಎರಡನೇ ಭಾಗ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

 

Share Post