CinemaNationalPolitics

ರಾಹುಲ್‌ ಗಾಂಧಿ ಬಿಗ್‌ಬಾಸ್‌ಗೆ ಹೋದ್ರೆ ಪ್ರಧಾನಿಯಾಗ್ತಾರಂತೆ..!; ರಾಖಿ ಸಾವಂತ್‌ ಹೀಗೆ ಹೇಳಿದ್ಯಾಕೆ..?

ಮುಂಬೈ; ಬಾಲಿವುಡ್‌ ನಾಟಿ ರಾಖಿ ಸಾವಂತ್‌ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಇದೀಗ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಧಾನಿಯಾಗುವ ಬಗ್ಗೆ ಮಾತನಾಡಿದ್ದಾರೆ. ರಾಹುಲ್‌ ಗಾಂಧಿಗೆ ಒಂದಷ್ಟು ಸಲಹೆಗಳನ್ನೂ ರವಾನಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿದ್ದು, ರಾಹುಲ್‌ ಗಾಂಧಿಯವರು ಬಿಗ್‌ಬಾಸ್‌ಗೆ ಹೋದರೆ ಅವರು ಪ್ರಧಾನಿಯಾಗೋದಕ್ಕೆ ಅನುಕೂಲವಾಗುತ್ತೆ ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿಯವರು ಪ್ರಧಾನಿಯಾಗಬೇಕು ಎಂದಿರುವ ರಾಖಿ ಸಾವಂತ್‌, ಒಂದಷ್ಟು ಸಲಹೆಗಳನ್ನು ತಿಳಿಸಿದ್ದಾರೆ. ರಾಹುಲ್‌ ಗಾಂಧಿ ಒಳ್ಳೆಯವರು. ಅವರು ಪ್ರಧಾನಿಯಾಗಬೇಕು ಎಂದು ನಾನು ಬಯಸುತ್ತೇನೆ. ಅವರು ಪ್ರಧಾನಿಯಾಗಬೇಕಾದರೆ ಇನ್ನಷ್ಟು ಪಾಪುಲರ್‌ ಆಗಬೇಕು. ಪಾಪುಲಾರಿಟಿ ಸಿಗಬೇಕು ಅಂದ್ರೆ ರಾಹುಲ್‌ ಗಾಂದಿಯವರು ಬಿಗ್‌ಬಾಸ್‌ನಲ್ಲಿ ಭಾಗವಹಿಸಬೇಕು. ಆಗ ಅವರ ಜನಪ್ರಿಯತೆ ಮತ್ತಷ್ದಟು ಹೆಚ್ಚುತ್ತದೆ. ಇದರಿಂದ ಪ್ರಧಾನಿಯಾಗಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

Share Post